ಭೋಪಾಲ್: ಕಬ್ಬಿಣದ ರಾಡ್‍ಗಳನ್ನ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ರಸ್ತೆ ಬದಿಯ ಟೀ ಅಂಗಡಿ ಹಾಗೂ ಅದರ ಸಮೀಪದ ಮನೆಯೊಳಗೆ ನುಗ್ಗಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, 4 ಜನ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಜಬಲ್‍ಪುರ್‍ನ ಬರೇಲಾದಲ್ಲಿ ಈ ಘಟನೆ ನಡೆದಿದೆ. ಬಸ್‍ನಿಂದ ಇಳಿಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡೆಯೋದು ತಪ್ಪಿಸಲು ಹೋದಾಗ ಈ ಅಪಘಾತ ಸಂಭವಿಸಿದೆ. ಲಾರಿ ಚಾಲಕ ಅತೀ ವೇಗವಾಗಿ ಬಂದಿದ್ದು, ನಿಯಂತ್ರಣ ತಪ್ಪಿ ಟೀ ಅಂಗಡಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಅಲ್ಲಿ ಕುಳಿತಿದ್ದವರಲ್ಲಿ ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಒಂದು ಆಟೋರಿಕ್ಷಾ ಜಖಂಗೊಂಡಿದೆ.

ಘಟನೆ ಬಳಿಕ ಆಕ್ರೋಶಗೊಂಡ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಘಟನೆ ನಡೆದ ವೇಳೆ ಖಾಸಗಿ ಬಸ್ ಮಂಡ್ಲದಿಂದ ಜಬಲ್‍ಪುರ್ ಕಡೆಗೆ ಹೋಗುತ್ತಿತ್ತು ಎಂದು ವರದಿಯಾಗಿದೆ. ಗಾಯಾಳುಗಳನ್ನ ಜಬಲ್‍ಪುರ್ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ.





Leave a Reply