ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 8 ಲಕ್ಷಕ್ಕೇರಿಕೆ – ರಾಜ್ಯಗಳಲ್ಲಿ ಹೆಚ್ಚಿದ ಚೇತರಿಕೆ ಪ್ರಮಾಣ

– 49 ಸಾವಿರ ಮಂದಿಗೆ ಸೋಂಕು, 740 ಬಲಿ

ನವದೆಹಲಿ: ದೇಶದೆಲ್ಲೆಡೆ ಕೊರೊನಾ ಅಬ್ಬರಿಸುತ್ತಿದ್ದು, ದಿನದ ಸೋಂಕಿತರ ದಾಖಲೆ ಬರೆದಿದ್ದು, 49,310 ಮಂದಿಗೆ ಸೋಂಕು ದೃಢಪಟ್ಟಿದೆ. ಪರಿಣಾಮ ಒಟ್ಟು ಸೋಂಕಿತರ ಸಂಖ್ಯೆ 12,87,945ಕ್ಕೇರಿದೆ.

ದೇಶದಲ್ಲಿ ಇಂದು ಕೂಡ 740 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಪರಿಣಾಮ ಸೋಂಕಿಗೆ ಬಲಿಯಾದವರ ಸಂಖ್ಯೆ 30 ಸಾವಿರ ದಾಟಿದೆ. ಜಗತ್ತಿನ ಕೊರೊನಾ ಸಾವುಗಳ ಪಟ್ಟಿಯಲ್ಲಿ ಫ್ರಾನ್ಸ್ ದೇಶವನ್ನು ಹಿಂದಿಕ್ಕಿದ ಭಾರತ 6ನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ವಾರ 25 ಸಾವಿರ ಇದ್ದ ಸಾವಿನ ಸಂಖ್ಯೆ 30 ಸಾವಿರ ಗಡಿದಾಟಿದೆ. ಗುರುವಾರ ಮಹಾರಾಷ್ಟ್ರದಲ್ಲಿ 298 ಮಂದಿಗೆ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟಾರೆ ದೇಶದ ಸಾವಿನ ಪ್ರಕರಣಗಳಲ್ಲಿ ಶೇ.40 ರಷ್ಟು ಮಹಾರಾಷ್ಟ್ರದಿಂದಲೇ ವರದಿಯಾಗಿದೆ. ಮುಂಬೈ ನಗರದಲ್ಲಿ ಇದುವರೆಗೂ 5,930 ಮಂದಿ ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಚೇತರಿಕೆ ಪ್ರಮಾಣ 63.13ರಷ್ಟಿದ್ದು, ಮರಣ ಪ್ರಮಾಣ 2.41ರಷ್ಟಿದೆ. ದೇಶದ 19 ರಾಜ್ಯಗಳ ಕೊರೊನಾ ಚೇತರಿಕೆಯಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಿದೆ. ಉತ್ತರಖಂಡಾ 67.99, ಹಿಮಾಚಲ ಪ್ರದೇಶ 64.72, ಲಡಾಖ್ 84.31, ಪಂಜಾಬ್ 67.86, ಚಂಡೀಗಢ 68.97, ಹರಿಯಾಣ 72.50, ಗುಜರಾತ್ 72.30, ಡಿಯು ಡಮಾನ್ 65.67, ತಮಿಳುನಾಡು 70.12, ಮಧ್ಯ ಪ್ರದೇಶ 67.47, ಬಿಹಾರ 63.95, ಮಣಿಪುರ 69.48, ಒಡಿಸ್ಸಾ 70.96, ಚತ್ತೀಸ್‍ಗಢ 71.81, ಅಂಡಮಾನ್ ನಿಕೋಬರ್ 75, ತೆಲಂಗಾಣ 78.37 ರ ಸರಾಸರಿ ಪ್ರಮಾಣದಲ್ಲಿ ಕೋವಿಡ್ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ.

ಉಳಿದಂತೆ 4,40,135 ಮಂದಿ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಇದುವರೆಗೂ 1,54,28,170 ಕೊರೊನಾ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ. ಜುಲೈ 23 ರಂದು ದೇಶದ್ಯಾಂತ 3,52,801 ಮಾದರಿಗಳ ಪರೀಕ್ಷೆ ನಡೆಸಲಾಗಿದೆ.

 

Comments

Leave a Reply

Your email address will not be published. Required fields are marked *