8ರ ಮರಿ ಮೊಮ್ಮಗಳ ಮೇಲೆ 70ರ ವೃದ್ಧನಿಂದ ಅತ್ಯಾಚಾರ

RAPE CASE

ಚಿಕ್ಕಬಳ್ಳಾಪುರ: 70 ವರ್ಷದ ಕಾಮುಕ ವೃದ್ಧನೊರ್ವ ತನ್ನ 8 ವರ್ಷದ ಮರಿ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿ, ವಿಕೃತವಾಗಿ ವರ್ತಿಸಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎರಡನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯನ್ನು 70 ವರ್ಷದ ವೃದ್ಧ ಬೈರಪ್ಪ ಪುಸಲಾಯಿಸಿ ಮನೆಯ ಬಳಿಯೇ ಇರುವ ರೇಷ್ಮೆ ತೋಟಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯ ಬಟ್ಟೆ ಹರಿದು, ಮೃಗದಂತೆ ವರ್ತಿಸಿ, ಅತ್ಯಾಚಾರ ಎಸಗಿದ್ದಾನೆ. ನಂತರ ಮನೆಗೆ ಬಂದು ಅಳುತ್ತಿರುವುದನ್ನು ಗಮನಿಸಿದ ಬಾಲಕಿಯ ತಾಯಿ ಮಗುವನ್ನು ವಿಚಾರ ಮಾಡಿದಾಗ ಅತ್ಯಾಚಾರ ಪ್ರಕರಣ ಬಯಲಾಗಿದೆ.

ತೊಡೆ ಹಾಗೂ ಮೈಮೇಲೆ ಸಣ್ಣಪುಟ್ಟ ತರಚಿದ ಗಾಯಗಳಾಗಿವೆ. ಮೂತ್ರ ವಿಸರ್ಜನೆ ಮಾಡಲು ಬಾಲಕಿ ಅಳುತ್ತಿದ್ದ ಕಾರಣ ಬಾಲಕಿಯ ಪೋಷಕರು ಶಿಡ್ಲಘಟ್ಟ ನಗರದ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಸ್ವತಃ ಬಾಲಕಿ ಕೃತ್ಯ ಎಸಗಿದ ವೃದ್ಧನ ಬಗ್ಗೆ ಮಾಹಿತಿ ನೀಡಿದ್ದಾಳೆ. ಬಳಿಕ ಬಾಲಕಿಯ ತಾಯಿ ವೃದ್ಧನನ್ನು ಪ್ರಶ್ನಿಸಿದ್ದು, ಇದರಿಂದ ಕೆರಳಿದ ಕಾಮುಕ ಬೈರಪ್ಪ ಹಾಗೂ ಆತನ ಮಕ್ಕಳು, ಬಾಲಕಿಯ ತಾಯಿಯನ್ನು ಹೊಡೆದು ಹಲ್ಲೆ ಮಾಡಿದ್ದಾರೆ.

ಗ್ರಾಮದ ಕೆಲವರು ನ್ಯಾಯ ಪಂಚಾಯತಿ ಮಾಡಲು ಮುಂದಾಗಿದ್ದರು. ಇದರಿಂದ ಸಿಟ್ಟಿಗೆದ್ದ ಬಾಲಕಿಯ ತಾಯಿ, ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಂದು ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಬೈರಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಸುದ್ದಿ ತಿಳಿದು ಚಿಕ್ಕಬಳ್ಳಾಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಂತ್ರಸ್ತ ಬಾಲಕಿಗೆ ಆಪ್ತ ಸಮಾಲೋಚನೆ ನಡೆಸಿ ಧೈರ್ಯ ತುಂಬಿದ್ದಾರೆ.

Comments

Leave a Reply

Your email address will not be published. Required fields are marked *