77ರ ವಯಸ್ಸಲ್ಲೂ ಮೊಮ್ಮಗನ ಜೊತೆ ಬಿಗ್ ಬಿ ವರ್ಕೌಟ್

ಮುಂಬೈ: ಬಿಗ್ ಬಿ ಅಮಿತಾಬ್ ಬಚ್ಚನ್ ಅಂದ್ರೆನೇ ಬಾಲಿವುಡ್ ಅಲ್ಲಿ ಒಂದು ಹವಾ ಇದೆ. ಬಿಟೌನ್ ಲೆಜೆಂಡರಿ ಆ್ಯಕ್ಟರ್ ಅಮಿತಾಬ್ ಸದ್ಯ ಲಾಕ್‍ಡೌನ್ ಸಮಯದಲ್ಲಿ ಮೊಮ್ಮಗನ ಜೊತೆ ವರ್ಕೌಟ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಲಾಕ್‍ಡೌನ್‍ನಲ್ಲಿ ಮನೆಯಲ್ಲೇ ಇರುವ ಬಿಗ್ ಬಿ ಮೊಮ್ಮಗ ಅಗಸ್ತ್ಯ ನಂದಾ ಜೊತೆ ಜಿಮ್‍ನಲ್ಲಿ ವರ್ಕೌಟ್ ಮಾಡಿದ್ದಾರೆ. ಅಜ್ಜ, ಮೊಮ್ಮಗ ಇಬ್ಬರೂ ಡಂಬಲ್‍ಗಳನ್ನು ಹಿಡಿದು, ಫುಲ್ ಜೋಷ್‍ನಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿ ಅಮಿತಾಬ್ ಖುಷಿಪಟ್ಟಿದ್ದಾರೆ. 77ರ ವಯಸ್ಸಿನಲ್ಲೂ ಇಷ್ಟು ಜೋಷ್‍ನಲ್ಲಿ ಇರುವ ಬಿಗ್ ಬಿ ಅವರನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

https://www.instagram.com/p/CAcCOFyBHTg/

ಅಮಿತಾಬ್ ಬಚ್ಚನ್ ಅವರಿಗೆ ವಯಸ್ಸಾಗಿರಬಹುದು, ಆದ್ರೆ ಅವರ ಕಲೆಗೆ, ಪ್ರತಿಭೆಗೆ ವಯಸ್ಸಾಗಿಲ್ಲ. ಈಗಲೂ ಯುವ ನಟರಂತೆ ಹುಮ್ಮಸ್ಸಿನಿಂದ ಜೋಷ್‍ನಲ್ಲಿ ಸಿನಿಮಾಗಳನ್ನು ಬಿಗ್ ಬಿ ಮಾಡುತ್ತಾರೆ. ಕಳೆದ ವರ್ಷ ‘ಬದ್ಲಾ’ ಹಾಗೂ ‘ಸೈರಾ ನರಸಿಂಹರೆಡ್ಡಿ’ ಸಿನಿಮಾಗಳಲ್ಲಿ ನಟಿಸಿದ್ದ ಬಿಗ್ ಬಿ ಈ ವರ್ಷವೂ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈವರೆಗೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ 5 ರಾಷ್ಟ್ರಪ್ರಶಸ್ತಿಗಳು, 10 ಫಿಲ್ಮ್ ಫೇರ್ ಸೇರಿದಂತೆ ಹತ್ತು ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಕಲಾಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಸದ್ಯ ಅಮಿತಾಬ್ ಹಾಗೂ ಆಯುಷ್ಮಾನ್ ಖುರಾನಾ ಲೀಡ್ ರೋಲ್‍ನಲ್ಲಿ ಕಾಣಿಸಿಕೊಂಡಿರುವ ‘ಗುಲಾಬೊ ಸಿತಾಬೊ’ ಸಿನಿಮಾ ಕೆಲವೇ ದಿನಗಳಲ್ಲಿ ಓಟಿಟಿ ಪ್ಲ್ಯಾಟ್‍ಫಾರ್ಮ್ ಅಮೆಜಾನ್ ಪ್ರೈಮ್‍ನಲ್ಲಿ ರಿಲೀಸ್ ಆಗಲಿದೆ. ಇದು ಥಿಯೇಟರ್‍ನಲ್ಲಿ ರಿಲೀಸ್ ಆಗದೇ ನೇರವಾಗಿ ಡಿಜಿಟಲ್ ಪ್ಲ್ಯಾಟ್‍ಫಾರ್ಮ್‍ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಬಾಲಿವುಡ್ ಕಮರ್ಷಿಯಲ್ ಸಿನಿಮಾ ಎಂಬ ಹೆಗ್ಗಳಿಕೆ ಪಡೆಯಲಿದೆ.

ಇತ್ತ ಝುಂಡ್, ಚೆಹ್ರೇ, ಬ್ರಹ್ಮಾಸ್ತ್ರ ಸಿನಿಮಾಗಳು ಕೂಡ ರಿಲೀಸ್ ತೆರೆಕಾಣಲು ಸಜ್ಜಾಗಿದ್ದು, ‘ಕೌನ್ ಬನೇಗಾ ಕರೋಡ್‍ಪತಿ’ ರಿಯಾಲಿಟಿ ಶೋನಲ್ಲಿ ಬಿಗ್ ಬಿ ಕಮಾಲ್ ಮಾಡಲು ತಯಾರಿ ನಡೆಸಿದ್ದಾರೆ. ಹೀಗೆ ಈ ಇಳಿ ವಯಸ್ಸಿನಲ್ಲೂ ಬಾಲಿವುಡ್‍ನ ಬ್ಯುಸಿಯೆಸ್ಟ್ ಸೂಪರ್ ಸ್ಟಾರ್ ಆಗಿ ಕಲಾ ಸೇವೆ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *