ದೋಸೆಗೆ ಫೇಮಸ್ಸಾಗಿರೋ ವಿದ್ಯಾರ್ಥಿ ಭವನಕ್ಕೆ 75 ವರ್ಷದ ಸಂಭ್ರಮ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಲವು ವರ್ಷಗಳಿಂದ ಹೆಸರು ಮಾಡಿರುವ ವಿದ್ಯಾರ್ಥಿ ಭವನಕ್ಕೆ ಈಗ 75 ವರ್ಷದ ಸಂಭ್ರಮ.

ವಿದ್ಯಾರ್ಥಿ ಭವನ್‍ನಲ್ಲಿ ದೋಸೆ ಫೇಮಸ್ ಆಗಿದ್ದು, ಇಲ್ಲಿನ ದೋಸೆ ತಿನ್ನಲು ಜನರು ಮುಗಿ ಬೀಳುತ್ತಾರೆ. ತ್ರಿಕೋನ ಆಕಾರದಲ್ಲಿ ಮಸಾಲೆ ದೋಸೆ ಮಾಡಿ ಅದರೊಳಗೆ ಆಲೂಗಡ್ಡೆ ಪಲ್ಯ ಹಾಕಿ ಸಪ್ಲೈಯರ್ ಕೈಯಲ್ಲಿ 20-25 ಪ್ಲೇಟ್ ದೋಸೆ, ಕೂತ ಜಾಗದಲ್ಲಿ ನಿಮಿಷ ನಿಮಿಷಕ್ಕೂ ಗ್ರಾಹಕರಿಗೆ ನೀಡುತ್ತಾರೆ.

ಬೆಂಗಳೂರಿನ ಗಾಂಧಿ ಬಜಾರ್ ನಲ್ಲಿರುವ ವಿದ್ಯಾರ್ಥಿ ಭವನ ಹೋಟೆಲ್‍ನಲ್ಲಿ ಈ ದೋಸೆ ಸಿಗುತ್ತದೆ. ಇಲ್ಲಿನ ಮಸಾಲಾ ದೋಸೆ ಬರೀ ಈ ತಲೆಮಾರಿನ ಬಾಯಿರುಚಿ ಮಾತ್ರವಲ್ಲದೇ ಮೂರು ತಲೆಮಾರಿನ ಜನರ ಬಾಯಿ ರುಚಿ ತಣಿಸಿದೆ. ಡಿವಿಜಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಪಿ.ಲಂಕೇಶ್, ನಿಸಾರ್ ಅಹ್ಮದ್ ಹೀಗೆ ಎಷ್ಟೋ ಸಾಹಿತಿಗಳ ಪಾಲಿಗೂ ಈ ಹೋಟೆಲ್ ಅಚ್ಚುಮೆಚ್ಚು. ಅದರಲ್ಲೂ ನಿಸಾರ್ ಅಹ್ಮದ್‍ರ ಮನಸು ಗಾಂಧಿ ಬಜಾರು ಎಂಬ ಕವಿತೆಯಲ್ಲಿ ಮಸಾಲೆ ದೋಸೆ ರುಚಿ ಪಡೆದಿದೆ.

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಸಿಹಿಕಹಿ ಚಂದ್ರು, ನಿರ್ದೇಶಕ ರಿಷಬ್ ಶೆಟ್ಟಿ ಪ್ರತಿಯೊಬ್ಬರು ಇಲ್ಲಿನ ದೋಸೆ ಟೇಸ್ಟ್ ಮಾಡಿದ್ದಾರೆ. ಈ ವಿದ್ಯಾರ್ಥಿ ಭವನ ಈಗ 75 ವರ್ಷದ ಸಂಭ್ರಮದಲ್ಲಿದೆ. ಹಿರಿಯ ವ್ಯಕ್ತಿಗಳು ವಿದ್ಯಾರ್ಥಿ ಭವನ್ ಹೋಟೆಲ್‍ಗೆ ಹೋಗಿ ಅಲ್ಲಿನ ಮಸಾಲೆ ದೋಸೆ ಸವಿಯುತ್ತಾ ವಯಸ್ಸಾಗುತ್ತಿರುವುದೇ ಗೊತ್ತಾಗುತ್ತಿಲ್ಲ ಎನ್ನುವವರ ಮಧ್ಯೆ, ನ್ಯೂ ಟ್ರೆಂಡ್ ಜನರೇಷನ್ ಹುಡುಗ-ಹುಡುಗಿಯರು ಮಸಾಲೆ ದೋಸೆಯ ರುಚಿ ಸವಿಯುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *