ಗ್ರಾಮದ ನೀರಿನ ಸಮಸ್ಯೆ ನಿವಾರಿಸಲು ಏಕಾಂಗಿಯಾಗಿ ಬಾವಿ ಅಗೆಯುತ್ತಿದ್ದಾರೆ 70ರ ವಯೋವೃದ್ಧ!

ಭೋಪಾಲ್: ಗ್ರಾಮದ ನೀರಿನ ಸಮಸ್ಯೆ ನಿವಾರಿಸಲು ಪಣತೊಟ್ಟಿರುವ 70 ವರ್ಷದ ವ್ಯಕ್ತಿಯೊಬ್ಬರು, ಸತತ 18 ತಿಂಗಳುಗಳಿಂದ ಮಧ್ಯಪ್ರದೇಶದ ಗ್ರಾಮ ಒಂದರಲ್ಲಿ ಏಕಾಂಗಿಯಾಗಿ ಬಾವಿ ನಿರ್ಮಾಣ ಮಾಡುತ್ತಿದ್ದಾರೆ.

ಸೀತಾ ರಾಮ್ ಗ್ರಾಮದ ನೀರಿನ ಸಮಸ್ಯೆ ನಿವಾರಿಸಲು ಪಣತೊಟ್ಟಿರುವ ವ್ಯಕ್ತಿ. ಕಳೆದ 18 ತಿಂಗಳುಗಳಿಂದ ಬಾವಿ ಅಗೆಯುವ ಕಾರ್ಯದಲ್ಲಿ ನಿರತರಾಗಿರುವ ಸೀತಾ ರಾಮ್ ಅವರು ಈಗಾಗಲೇ 33 ಅಡಿ ಆಳದ ಬಾವಿ ನಿರ್ಮಾಣ ಮಾಡಿದ್ದಾರೆ.

ಸೀತಾ ರಾಮ್ ಮದುವೆಯಾಗದೆ ಸಹೋದರರ ಜೊತೆ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದಾರೆ. ಆದರೆ ಬೇಸಿಗೆ ಆರಂಭವಾಗುತ್ತಿದಂತೆ ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿತ್ತು. ಕಳೆದ ಎರಡುವರೆ ವರ್ಷಗಳಿಂದ ಈ ಸಮಸ್ಯೆ ಮುಂದುವರೆದಿತ್ತು. ನೀರಿನ ಸಮಸ್ಯೆಯನ್ನು ಪರಿಹಾರ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾದ ಕಾರಣ ನಾನೇ ಏಕಾಂಗಿಯಾಗಿ ಬಾವಿ ನಿರ್ಮಾಣ ಮಾಡಲು ಮುಂದಾಗಿದ್ದೇನೆ ಎಂದು ತಿಳಿಸಿದ್ದಾರೆ.

ಸೀತಾ ರಾಮ್ ತಮ್ಮ ನಿರ್ಧಾರವನ್ನು ತಿಳಿಸಿದಾಗ ಕುಟುಂಬ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಗ್ರಾಮದ ಯಾರೊಬ್ಬರು ಇವರ ಸಹಾಯಕ್ಕೆ ಬರಲಿಲ್ಲ ಎಂದು ವರದಿಯಾಗಿದೆ.

ಸಹಾಯ ಯಾರೂ ಮಾಡದೇ ಇದ್ದರೂ ಧೃತಿಗೆಡದೆ ಸೀತಾ ರಾಮ್ ಏಕಾಂಗಿಯಾಗಿ ಬಾವಿ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಬಾವಿ ಅಗೆಯುತ್ತಿರುವ ಸೀತಾರಾಮ್ ಈಗಲೂ ನಾನು ಶಕ್ತನಾಗಿದ್ದೇನೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *