ಕೀವ್‍ನಲ್ಲಿ ರಷ್ಯಾ ರಾಕೆಟ್ ದಾಳಿಗೆ 70 ಉಕ್ರೇನ್ ಸೈನಿಕರು ಬಲಿ

ಕೀವ್: ರಷ್ಯಾ ನಡೆಸಿದ ರಾಕೆಟ್ ದಾಳಿಗೆ 70 ಸೈನಿಕರು ಬಲಿಯಾಗಿದ್ದಾರೆ ಎಂದು ಉಕ್ರೇನ್ ಮಿಲಿಟರಿ ಪಡೆ ಮಾಹಿತಿ ನೀಡಿದೆ.

ರಷ್ಯಾ ಮಿಲಿಟರಿ ಪಡೆ ಕೀವ್‍ನ್ನು ವಶಪಡಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ಇಂದು ಉಕ್ರೇನ್‍ನ 70 ಸೈನಿಕರನ್ನು ರಾಕೆಟ್ ದಾಳಿ ಮೂಲಕ ಬಲಿ ಪಡೆದಿದೆ. ರಾಕೆಟ್ ದಾಳಿಗೆ ಸೈನಿಕರೊಂದಿಗೆ ಹಲವು ನಾಗರಿಕರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೀವ್‍ಗೆ ಮುನ್ನುಗ್ಗುತ್ತಿದೆ 64 ಕಿ.ಮೀ ಉದ್ದದ ರಷ್ಯಾ ಸೇನೆ

 

ರಷ್ಯಾ ಇಂದು ಕೀವ್ ಮತ್ತು ಖಾರ್ಕಿವ್ ಪ್ರದೇಶದಲ್ಲಿ ಅತೀ ಹೆಚ್ಚಿನ ದಾಳಿ ಮಾಡಿದ್ದು, ರಾಕೆಟ್ ಮತ್ತು ಬಾಂಬ್ ದಾಳಿ ಮುಂದುವರಿಸಿರುವ ರಷ್ಯಾ ರಕ್ತಪಾತವನ್ನು ಮುಂದುವರಿಸಿದೆ. ನಿನ್ನೆ ಸಂಧಾನ ಸಭೆ ನಡೆಸಿದರೂ ಯಾವುದೇ ಫಲನೀಡಿಲ್ಲ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು

ನಿನ್ನೆ ರಾತ್ರಿಯಿಡೀ ಕೀವ್ ಮೇಲೆ ರಷ್ಯಾ ದಾಳಿ ನಡೆಸಿದೆ. ರಷ್ಯಾ ದಾಳಿಗೆ ಉಕ್ರೇನ್‍ನ ಬೃಹತ್ ಕಟ್ಟಗಳು ಧ್ವಂಸವಾಗಿದೆ. ರಷ್ಯಾ ಜನವಸತಿ ಕೇಂದ್ರಗಳ ಮೇಲೂ ದಾಳಿ ಮಾಡುತ್ತಿದ್ದು, ಈಗ ಖಾರ್ಕಿವ್‍ನ ಕೇಂದ್ರದ ಮೇಲೆ ಬಾಂಬ್ ದಾಳಿ ಮಾಡಿದೆ. ಇದು ಸ್ಥಳೀಯ ಆಡಳಿತ ಕಚೇರಿ ಮೇಲೆ ರಷ್ಯಾ ದಾಳಿ ನಡೆಸಿದೆ. ಕೀವ್ ಮತ್ತು ಖಾರ್ಕಿವ್‍ನಲ್ಲಿ ಪರಿಸ್ಥಿತಿ ಶೋಚನೀಯವಾಗಿದೆ.

Comments

Leave a Reply

Your email address will not be published. Required fields are marked *