70 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ADLR, DDLR ಎಸಿಬಿ ಬಲೆಗೆ

– ಏಕಕಾಲದಲ್ಲಿ ಮೂರು ಕಡೆ ಎಸಿಬಿ ದಾಳಿ

ಬೆಂಗಳೂರು: ಲ್ಯಾಂಡ್ ರೆಕಾರ್ಡ್ ಮಾಡಿಕೊಡಲು 70 ಲಕ್ಷ ಲಂಚಕ್ಕೆ ಬೇಡಿಕೆ ಮಾಡಿದ್ದ ಎಡಿಎಲ್‍ಆರ್, ಡಿಡಿಎಲ್‍ಆರ್ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಮಾಡಿ ಎಡಿಎಲ್‍ಆರ್ ಅಧಿಕಾರಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಎಡಿಎಲ್‍ಆರ್ ಅಧಿಕಾರಿ ಆನಂದ್ ಮತ್ತು ರಮೇಶ್ ಎಂಬುವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ತಡರಾತ್ರಿ ಬೆಂಗಳೂರಿನ ಜಾಲಹಳ್ಳಿ, ತುಮಕೂರು ಸೇರಿದಂತೆ ಒಟ್ಟು ಮೂರು ಕಡೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆರೋಪಿ ಆನಂದ್ ಯಲಹಂಕ ತಾಲೂಕಿನ ಕುದುರುಗೆರೆಯಲ್ಲಿರುವ ಸರ್ವೆ ನಂಬರ್, 145,146ನ ಲ್ಯಾಂಡ್ ರೆಕಾರ್ಡ್ ಮಾಡಿಕೊಡಲು 70 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 25 ಲಕ್ಷ ಹಣ ಪಡೆದಿದ್ದರು. ಈ ಸಂಬಂಧ ಎಸಿಬಿ ಅಧಿಕಾರಿಗಳಿಗೆ ದೂರು ಕೊಡಲಾಗಿತ್ತು. ಇದನ್ನೂ ಓದಿ: ದೋಸೆ ಮಾಡುವಾತ ಲಕ್ಷಾಂತರ ರೂಪಾಯಿ ವಂಚನೆ-ಕಡಬದಿಂದ ಮೈಸೂರಿಗೆ ಪರಾರಿ

ದೂರಿನ ಆಧಾರದ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ದಾಳಿಯ ವೇಳೆ ಮನೆಯಲ್ಲಿದ್ದ 25 ಲಕ್ಷ ನಗದು 70 ಲಕ್ಷ ಮೊತ್ತದ ಮೂರು ಚೆಕ್ ಹಾಗೂ ದಾಖಲೆಗಳನ್ನ ವಶಪಡಿಸಿಕೊಳ್ಳಲಾಗಿದೆ. ಡಿಡಿಎಲ್‍ಆರ್ ಕುಸುಮ ಲತಾ ಎಂಬವರ ಮನೆ ಮತ್ತು ಸರ್ವೆ ಅಧಿಕಾರಿ ಶ್ರೀನಿವಾಸ್ ರ ತುಮಕೂರಿನ ಮನೆಗಳ ಮೇಲು ದಾಳಿ ಮಾಡಿದ್ದ ಎಸಿಬಿ ಅಧಿಕಾರಿಗಳಿಗೆ ಕೆಲವು ದಾಖಲೆ ಪತ್ರಗಳು ಸಿಕ್ಕಿದ್ದು ಜಪ್ತಿ ಮಾಡಲಾಗಿದೆ. ದಾಳಿ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ನೀರು ಕುಡಿಯಲು ಹೋಗಿ ಕಾಲುವೆಯಲ್ಲಿ ಬಿದ್ದು ಯುವಕ ಸಾವು

Comments

Leave a Reply

Your email address will not be published. Required fields are marked *