ಶಿಲ್ಲಾಂಗ್: ಅವಳಿ-ಜವಳಿ ಹೆಣ್ಣು ಮಕ್ಕಳ ಮೇಲೆ ಮಲ ತಂದೆಯೇ ಅತ್ಯಾಚಾರ ಮಾಡಿರುವ ಘಟನೆ ಪೂರ್ವ ಗರೊ ಹಿಲ್ಸ್ ಜಿಲ್ಲೆಯ ಚೇರಾನ್ ಸೊಂಗಿಟಲ್ ಗ್ರಾಮದಲ್ಲಿ ನಡೆದಿದೆ.
7 ವರ್ಷದ ಅವಳಿ ಮಕ್ಕಳ ಮೇಲೆ ಮಲ ತಂದೆಯೇ ಕೆಲವು ತಿಂಗಳಿನಿಂದ ಅತ್ಯಾಚಾರವೆಸಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಸಂತ್ರಸ್ತ ಹೆಣ್ಣುಮಕ್ಕಳ ಕುಟುಂಬದವರಿಂದ ಈ ಬಗ್ಗೆ ದೂರು ದಾಖಲಾಗಿದೆ. ಅವಳಿ ಹೆಣ್ಣು ಮಕ್ಕಳನನ್ನ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ರಿಂಗ್‍ರಂಗ್ ಜಿಲ್ಲೆಯ ಪೊಲೀಸ್ ಅಧಿಕಾರಿ ಟಿಜಿ ಮೋಮಿನ್ ಹೇಳಿದ್ದಾರೆ.
ಆರೋಪಿ ತಂದೆ ಸದ್ಯ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
22 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಹೆಡ್ಮಾಸ್ಟರ್ಗೆ 55 ವರ್ಷ ಜೈಲು ಶಿಕ್ಷೆ https://t.co/ALqMtdPyoI #Education #Jail #Student #court pic.twitter.com/hVIjFJOeHz
— PublicTV (@publictvnews) September 20, 2017

Leave a Reply