7 ಕ್ವಿಂಟಾಲ್‌ ಗೋಮಾಂಸ – ವಾಹನಕ್ಕೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಬೆಳಗಾವಿ: ಗೋಮಾಂಸ (Beef )ಸಾಗಿಸುತ್ತಿದ್ದ ವಾಹನಕ್ಕೆ ಗ್ರಾಮಸ್ಥರು ಬೆಂಕಿ ಇಟ್ಟ ಘಟನೆ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದಿದೆ

ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಿಂದ ಹೈದರಾಬಾದ್‌ಗೆ (Hyderabad ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಐನಾಪುರ ಗ್ರಾಮದಲ್ಲಿ ಜನರು ಲಾರಿಯನ್ನು ತಡೆದು ನಿಲ್ಲಿಸಿದ್ದಾರೆ.  ಇದನ್ನೂ ಓದಿ:  ಟಾರ್ಗೆಟ್‌ 20 ಲಕ್ಷ, ನಡೆದಿದ್ದು 10 ಸಾವಿರ ಮಂದಿ ಗಣತಿ – ಮೊದಲ ದಿನವೇ ನೀರಸ ಆರಂಭ

ಗೋಮಾಂಸ ಸಾಗಿಸುತ್ತಿದ್ದ ಚಾಲಕನನ್ನು ಕೆಳಗೆ ಇಳಿಸಿ ಥಳಿಸಿ ಕೂಡಿ ಹಾಕಿದ್ದಾರೆ. ಪರಿಶೀಲಿಸಿದಾಗ ಸುಮಾರು 7 ಕ್ವಿಂಟಾಲ್‌ನಷ್ಟು ಗೋಮಾಂಸ ಲಾರಿಯಲ್ಲಿ ಇರುವುದು ಪತ್ತೆಯಾಗಿದೆ. ಭಾರೀ ಪ್ರಮಾಣದ ಗೋಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ ಸಿಟ್ಟಾದ ಜನರು ಲಾರಿಗೆ ಬೆಂಕಿ ಹಚ್ಚಿದ್ದಾರೆ.

ಸ್ಥಳಕ್ಕೆ ಕಾಗವಾಡ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಐನಾಪುರ ಗ್ರಾಮದಲ್ಲಿ ಮುಂಜಾಗ್ರತವಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ ಕಲ್ಪಿಸಲಾಗಿದೆ. ಇಬ್ಬರು ಡಿಸ್‌ಎಸ್‌ಪಿ, 4 ಸಿಪಿಐ, 8 ಪಿಎಸ್‌ಐ ಸೇರಿ ಸೇರಿ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.