5 ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಸಜೀವ ದಹನ

BURNT

ಚಂಡೀಗಢ: ಗುಡಿಸಲಿನಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ 5 ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಸಜೀವದಹನಗೊಂಡಿರುವ ಘಟನೆ ಪಂಜಾಬ್‌ನ ಲೂದಿಯಾನದಲ್ಲಿ ನಡೆದಿದೆ.

POLICE

ಘಟನೆಯ ಕುರಿತು ಮಾಹಿತಿ ನೀಡಿರುವ ಟಿಬ್ಬಾ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಬಲದೇವ್ ರಾಜ್, ರಾತ್ರಿ 2 ಗಂಟೆ ಸುಮಾರಿಗೆ ಕುಟುಂಬ ಸದಸ್ಯರೆಲ್ಲರೂ ಗುಡಿಸಲಿನಲ್ಲಿ ಮಲಗಿದ್ದ ವೇಳೆ ಘಟನೆ ಸಂಭವಿಸಿದೆ. ಮೃತರನ್ನು ವಲಸೆ ಕಾರ್ಮಿಕರು ಎಂದು ಗುರುತಿಸಲಾಗಿದ್ದು, ಇವರು ಟಿಬ್ಬಾ ಪುರಸಭೆ ವ್ಯಾಪ್ತಿಯ ಕಸ ವಿಲೇವಾರಿ ಮಾಡುವ ರಸ್ತೆಯಲ್ಲಿ ಮಾರ್ಗದಲ್ಲಿರುವ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು ಎಂದು ಹೇಳಿದ್ದಾರೆ.

ಮೃತಪಟ್ಟವರ ವೈಯಕ್ತಿಕ ವಿವರ ಪತ್ತೆಯಾಗಿಲ್ಲ. ಅಲ್ಲದೆ ಬೆಂಕಿ ಬಿದ್ದಿರುವುಕ್ಕೆ ನಿಖರ ಕಾರಣ ಏನೇಂಬುದೂ ತಿಳಿದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಟಿಬ್ಬಾ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

Comments

Leave a Reply

Your email address will not be published. Required fields are marked *