ಮುಂಬೈ: ಕ್ರಿಕೆಟ್ ರೋಚಕತೆಯ ಆಟ ಎಂಬುವುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದ್ದು, ಪಂದ್ಯದ ಅಂತಿಮ ಎಸೆತದಲ್ಲಿ 6 ರನ್ ಸಿಡಿಸುವ ಒತ್ತಡದಲ್ಲಿದ್ದ ತಂಡ ಯಾವುದೇ ರನ್ ಹೊಡೆಯದೇ ಜಯ ಗಳಿಸಿದ ಘಟನೆ ಮುಂಬೈ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ ನಡೆದಿದೆ.
ಆದರ್ಶ್ ಕ್ರಿಕೆಟ್ ಕ್ಲಬ್ 2019 ಟೆನ್ನಿಸ್ ಬಾಲ್ ಟೂರ್ನಿಯ ದೇಸಾಯಿ ಹಾಗೂ ಜೂನೈ ದೊಂಬಿವಿಲಿ ತಂಡದ ನಡುವೆ ನಡೆದ ಪಂದ್ಯದಲ್ಲಿ ಘಟನೆ ನಡೆದಿದೆ. ದೇಸಾಯಿ ತಂಡದ 5 ಓವರ್ ಗಳಲ್ಲಿ 76 ರನ್ ಗುರಿಯನ್ನು ಬೆನ್ನಟ್ಟಿತ್ತು. ಪಂದ್ಯ ಅಂತಿಮ ಹಂತಕ್ಕೆ ತಲುಪಿದ ವೇಳೆ ಗೆಲುವು ಪಡೆಯಲು ಕೊನೆಯ ಎಸೆತದಲ್ಲಿ 6 ರನ್ ಗಳಿಸುವ ಒತ್ತಡವನ್ನು ಎದುರಿಸಿತ್ತು. ಆದರೆ ಎದುರಾಳಿ ತಂಡದ ಬೌಲರ್ ಮಾಡಿದ ಎಡವಟ್ಟಿನಿಂದ ದೇಸಾಯಿ ತಂಡದ ಬ್ಯಾಟ್ಸ್ ಮನ್ ರನ್ ಸಿಡಿಸುವ ಅಗತ್ಯವಿಲ್ಲದೇ ಜಯ ಪಡೆಯಿತು.
https://twitter.com/Amit_smiling/status/1082707807307264000?
ಜೂನಿ ದೊಂಬಿವಿಲಿ ತಂಡದ ಬೌಲರ್ ಕೊನೆಯ ಎಸೆತದ ವೇಳೆ 6 ವೈಡ್ ಬಾಲ್ ಹಾಕುವ ಮೂಲಕ ಎದುರಾಳಿ ತಂಡದ ಗೆಲುವಿಗೆ ಕಾರಣರಾದರು. ಇದರೊಂದಿಗೆ ಒಂದು ಎಸೆತ ಬಾಕಿ ಇರುವಂತೆ ದೇಸಾಯಿ ತಂಡ ಗೆಲುವು ಪಡೆಯಿತು. ಲೆಫ್ಟ್ ಹ್ಯಾಂಡ್ ಬೌಲರ್ ಸತತ ವೈಡ್ ಎಸೆದರೂ ಕೂಡ ಬೌಲಿಂಗ್ ಸೈಡ್ ಬದಲಾವಣೆ ಮಾಡದೇ ಅಚ್ಚರಿ ಮೂಡಿಸಿದ್ದ. ವಿಶೇಷ ಎಂದರೆ ಅಂತಿಮ ಎಸೆತ ಸಿಕ್ಸ್ ನೀಡಬಾರದು ಎಂದು ಬೌಲ್ ಮಾಡಿದ್ದ ವೇಳೆ ಸ್ಟ್ರೈಕ್ ನಲ್ಲಿ ದೇಸಾಯಿ ತಂಡದ ಬೌಲರ್ ಬ್ಯಾಟ್ ಬೀಸುತ್ತಿದ್ದ. ಅಲ್ಲದೇ ವೈಡ್ ಬಾಲಿಗೆ ಔಟ್ ಎಂದು ಕೂಡ ಬೌಲರ್ ಮನವಿ ಮಾಡಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply