ಫಸ್ಟ್‌ ಟೈಂ ಜಸ್ಟ್ ಮಿಸ್, ಸೆಕೆಂಡ್‌ ಟೈಂ ಸಕ್ಸಸ್ – ಮದುವೆಯಾದ 1 ತಿಂಗಳಲ್ಲೇ ಪ್ರಿಯಕರ ಜೊತೆ ಸೇರಿ ಪತಿಯನ್ನೇ ಕೊಂದಳು

MARRIAGE

ಹೈದರಾಬಾದ್: ಮದುವೆಯಾದ ಕೇವಲ 36 ದಿನಗಳಲ್ಲಿಯೇ ಮಹಿಳೆಯೊಬ್ಬಳು ನಂತರ ತನ್ನ ಪ್ರಿಯಕರ, ಆತನ ನಾಲ್ವರು ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಸೇರಿ ಪತಿಯನ್ನು ಕೊಂದಿದ್ದಾಳೆ.

ಏಪ್ರಿಲ್ 28 ರಂದು ತೆಲಂಗಾಣದ ಸಿದ್ದಿಪೇಟ್‍ನಲ್ಲಿ ಈ ಭಯಾನಕ ಘಟನೆ ಸಂಭವಿಸಿದ್ದು, 10 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಮುನ್ನ ಆರೋಪಿ ಮಹಿಳೆ, ತನ್ನ ಪತಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದಳು. ಆದರೆ ಮೃತ ವ್ಯಕ್ತಿಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ವಿಚಾರಣೆ ನಡೆಸುವಾಗ ಮಹಿಳೆಯೇ ಕೊಲೆ ಮಾಡಿರುವುದು ಸಾಬೀತಾಗಿದೆ.

ಮೃತನನ್ನು ಕೆ. ಚಂದ್ರಶೇಖರ್(28) ಎಂದು ಗುರುತಿಸಲಾಗಿದ್ದು, 19 ವರ್ಷದ ಶ್ಯಾಮಲಾ, 20 ವರ್ಷದ ತನ್ನ ಪ್ರಿಯಕರ ಶಿವ ಕುಮಾರ್ ಜೊತೆ ಸೇರಿ ಪತಿ ಚಂದ್ರಶೇಖರ್ ಕತ್ತು ಹಿಸುಕಿ ಕೊಂದಿದ್ದಾಳೆ. ಮೊದಲು ವಿಷ ಹಾಕಿ ಗಂಡನನ್ನು ಕೊಲ್ಲಲು ಯತ್ನಿಸಿ ವಿಫಲವಾದ ಬಳಿಕ, ಪ್ರಿಯಕರ ಶಿವ, ಆತನ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಸೇರಿ ಹತ್ಯೆಗೆ ಪ್ಲಾನ್ ಮಾಡಿದ್ದಾಳೆ. ಇದನ್ನೂ ಓದಿ: ಸಂಸಾರದ ತೊಂದರೆ ಸರಿಪಡಿಸುವ ನೆಪದಲ್ಲಿ ಮಾಂತ್ರಿಕನಿಂದ 79 ದಿನ ಮಹಿಳೆಯ ಮೇಲೆ ಅತ್ಯಾಚಾರ

ಶ್ಯಾಮಲಾ ಕಳೆದ ಮೂರು ವರ್ಷಗಳಿಂದ ಶಿವನನ್ನು ಪ್ರೀತಿಸುತ್ತಿದ್ದಳು. ಆದರೆ ಮನೆಯವರ ಒತ್ತಡದಿಂದ ಮಾರ್ಚ್ 23 ರಂದು ಚಂದ್ರಶೇಖರ್ ಅವರನ್ನು ವಿವಾಹವಾಗಿದ್ದಳು. ಮದುವೆಯ ನಂತರವೂ ಪ್ರಿಯಕರ ಶಿವ ಜೊತೆಗೆ ಸಂಬಂಧವನ್ನು ಮುಂದುವರೆಸಿದಳು. ಬಳಿಕ ಚಂದ್ರಶೇಖರ್‍ನನ್ನು ಸಾಯಿಸಲು ಪ್ಲಾನ್ ಮಾಡಿದಳು. ಅದರಂತೆ ಏಪ್ರಿಲ್ 19 ರಂದು ತನ್ನ ಗಂಡನಿಗೆ ಊಟದಲ್ಲಿ ಇಲಿ ಪಾಷಣವ ಬೆರೆಸಿ ಕೊಲ್ಲಲು ಯತ್ನಿಸಿದಳು. ಆದರೆ ಚಂದ್ರಶೇಖರ್ ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

crime

ತದನಂತರ ಪ್ರಿಯಕರನೊಂದಿಗೆ ಹೊಸ ಸಂಚು ರೂಪಿಸಿ, ಅದರಂತೆ ಏಪ್ರಿಲ್ 19 ರಂದು ಚಂದ್ರಶೇಖರ್‌ಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದಾಳೆ. ಅನಂತಸಾಗರ ಗ್ರಾಮದ ಹೊರವಲಯದಲ್ಲಿರುವ ನಿರ್ಜನ ಪ್ರದೇಶವನ್ನು ತಲುಪಿದಾಗ, ಶಿವ ತನ್ನ ಸ್ನೇಹಿತರಾದ ರಾಕೇಶ್, ರಂಜಿತ್ ಮತ್ತು ಆತನ ಇಬ್ಬರು ಸಂಬಂಧಿಕರಾದ ಸಾಯಿಕೃಷ್ಣ ಮತ್ತು ಭಾರ್ಗವ್ ಅವರೊಂದಿಗೆ ದ್ವಿಚಕ್ರ ವಾಹನದಿಂದ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಶ್ಯಾಮಲಾ, ಶಿವ ಇಬ್ಬರು ಸೇರಿ ಕತ್ತು ಚಂದ್ರಶೇಖರ್ ಕತ್ತು ಹಿಸುಕಿ ಹತ್ಯೆಗೈದು, ಎದೆನೋವು ಕಾಣಿಸಿಕೊಂಡು ಚಂದ್ರಶೇಖರ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರಿಗೆ ತಿಳಿಸಿದ್ದಾಳೆ. ಆದರೆ ಈ ಬಗ್ಗೆ ಅನುಮಾನಗೊಂಡ ಮೃತನ ತಾಯಿ ಶ್ಯಾಮಲಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

POLICE JEEP

ಕೊನೆಗೆ ತನಿಖೆ ವೇಳೆ ಪೊಲೀಸರ ಬಳಿ ಆರೋಪಿ ಮಹಿಳೆ ಸತ್ಯ ಬಾಯ್ಬಿಟ್ಟಿದ್ದಾಳೆ. ಇದೀಗ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿದ್ದಿಪೇಟೆ ಎರಡರ ಟೌನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ರವಿಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ನಿದ್ರೆ ಮಾಡುತ್ತಿರುವಾಗಲೇ ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ

Comments

Leave a Reply

Your email address will not be published. Required fields are marked *