6ರ ಕಂದಮ್ಮನ ಅತ್ಯಾಚಾರಗೈದ ಕಾಮುಕರ ಸ್ಕೆಚ್ ಬಿಡುಗಡೆ

– 4 ದಿನವದ್ರೂ ಪತ್ತೆಯಾಗದ ಆರೋಪಿಗಳು

ಲಕ್ನೋ: ಆರು ವರ್ಷದ ಬಾಲಕಿಯನ್ನು ಅತ್ಯಾಚಾರಗೈದ ಕಾಮುಕರ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಗುರುವಾರ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಆಕೆಯನ್ನು ಪೊದೆಯಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು.

ಘಟನೆ ನಡೆದು ನಾಲ್ಕು ದಿನ ಕಳೆದರೂ ಆರೋಪಿಗಳ ಬಂಧನವಾಗದ ಹಿನ್ನೆಲೆ ಪೊಲೀಸರು ಸ್ಥಳೀಯರ ಮಾಹಿತಿ ಮೇರೆಗೆ ಸಿದ್ಧಪಡಿಲಾಗಿರುವ ರೇಖಾಚಿತ್ರವನ್ನು ಪ್ರಕಟಿಸಿದ್ದಾರೆ. ಮೂರು ಚಿತ್ರಗಳು ಸಾಮ್ಯತೆ ಹೊಂದಿರುವದರಿಂದ ರೇಖಾಚಿತ್ರದಲ್ಲಿರುವ ವ್ಯಕ್ತಿ ಒಬ್ಬನೇ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ದೆಹಲಿಯಿಂದ ನೂರು ಕಿಲೋ ಮೀಟರ್ ದೂರದಲ್ಲಿರುವ ಮುಕ್ತೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮನೆಯ ಮುಂದೆ ಆಡುತ್ತಿದ್ದ ಬಾಲಕಿಯನ್ನು ಬೈಕ್ ಮೇಲೆ ಬಂದ ಸವಾರನೋರ್ವ ಅಪಹರಿಸಿದ್ದಾನೆ. ಪೋಷಕರು ಮಗಳು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮರುದಿನ ಬೆಳಗ್ಗೆ ಗ್ರಾಮದ ಸಮೀಪದ ಪೊದೆಯಲ್ಲಿ ಪ್ರಜ್ಞಾಹೀನವಾಗಿ ಮಗು ಪತ್ತೆಯಾಗಿದೆ. ರಕ್ತದ ಮಡುವಿನಲ್ಲಿ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೀರತ್ ನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಮಗುವಿನ ಮೇಲೆ ಅತ್ಯಾಚಾರ ಆಗಿರೋದನ್ನು ಖಚಿತಪಡಿಸಿದ್ದಾರೆ. ಮಗುವಿನ ಆರೋಗ್ಯ ಸ್ಥಿರವಾಗಿದ್ದು, ಸಂಪೂರ್ಣವಾಗಿ ಚೇತರಿಕೆಯಾಗಲು ದೀರ್ಘ ಸಮಯದ ಚಿಕಿತ್ಸೆಯ ಅಗತ್ಯವಿದೆ. ಮಗು ಇನ್ನೂ ಅರೆ ಪ್ರಜ್ಷೆ ಸ್ಥಿತಿಯಲ್ಲಿರೋದರಿಂದ ಪೊಲೀಸರು ಕಂದಮ್ಮನ ಹೇಳಿಕೆಯನ್ನು ದಾಖಲಿಸಿಕೊಂಡಿಲ್ಲ. ಮಗುವಿಗೆ ಈಗಾಗಲೇ ಒಂದು ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಹೇಳಿದ್ದಾರೆ.

ಇನ್ನು ಪ್ರಕರಣದ ಮಾಹಿತಿ ನೀಡಿರುವ ಪೊಲೀಸ್ ಚೀಫ್ ಸಂಜೀವ್ ಸುಮನ್, ಆದಷ್ಟು ಬೇಗ ಆರೋಪಿಗಳನ್ನು ನಾವು ಬಂಧಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತ ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹುವಡಾ ಜಿಲ್ಲಾ ಪೊಲೀಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿವೆ.

Comments

Leave a Reply

Your email address will not be published. Required fields are marked *