– ವಾಶ್‍ರೂಂ ಕಿಟಕಿಯಿಂದ ಜಂಪ್
ಹೈದರಾಬಾದ್: ಮಹಿಳಾ ಟೆಕ್ಕಿ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದಾರಾಬಾದ್ ನಲ್ಲಿ ನಡೆದಿದೆ.
21 ವರ್ಷದ ಸುಶ್ಮಿತಾ ಆತ್ಮಹತ್ಯೆಗೆ ಶರಣಾದ ಟೆಕ್ಕಿ. ಟೆಕ್ಷಟೈಲ್ ವ್ಯಾಪಾರಿ ರಂಗನ್ ಗೋವಿಂದರಾಜ್ ಅವರ ಮೂವರ ಮಕ್ಕಳಲ್ಲಿ ಹಿರಿಯಳಾದ ಸುಶ್ಮಿತಾ ಟೆಕ್ ಮಹೀಂದ್ರಾದಲ್ಲಿ ಕೆಲಸ ಮಾಡಿಕೊಂಡಿದ್ದಳು. ಅಕ್ಟೋಬರ್ 30ರಂದು ಸುಶ್ಮಿತಾ ಕೆಲಸಕ್ಕೆ ಸೇರಿಕೊಂಡು ವೃತ್ತಿ ಜೀವನ ಆರಂಭಿಸಿದ್ದಳು.

ಗುರುವಾರ ಬೆಳಗ್ಗೆ 9.30ಕ್ಕೆ ಸುಶ್ಮಿತಾಳಕ್ಕೆ ತಂದೆಯೇ ಡ್ರಾಪ್ ಮಾಡಿದ್ದರು. ಆಫೀಸ್ ಒಳಗೆ ಬಂದ ಸುಶ್ಮಿತಾ ನೇರವಾಗಿ ಕ್ಯಾಂಟೀನ್ ಗೆ ತೆರಳಿದ್ದಾಳೆ. ಅಲ್ಲಿಂದ ಆರನೇ ಮಹಡಿಯಲ್ಲಿರುವ ವಾಶ್ ರೂಂಗೆ ಹೋದ ಸುಶ್ಮಿತಾ ಕಿಟಕಿಯಿಂದ ಜಿಗಿದಿದ್ದಾಳೆ. ಸಿಬ್ಬಂದಿ ಆಗಮಿಸುವಷ್ಟರಲ್ಲಿಯಾ ಸುಶ್ಮಿತಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇದನ್ನೂ ಓದಿ: ಏಳನೇ ಮಹಡಿಯಿಂದ ಜಿಗಿದ ನವವಿವಾಹಿತೆ

ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸುಶ್ಮಿತಾ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸುಶ್ಮಿತಾ ಕುಟುಂಬಸ್ಥರು ಮತ್ತು ಸಹದ್ಯೋಗಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಡೇಟಿಂಗ್ ಆ್ಯಪ್‍ನಲ್ಲಿ ಪರಿಚಯ- ಟೆಕ್ಕಿಯನ್ನು ಮನೆಗೆ ಕರೆದು 5 ಲಕ್ಷ ಕೊಡು ಅಂದ್ಳು!

Leave a Reply