– ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 26,815ಕ್ಕೆ ಏರಿಕೆ
– 15 ಮಂದಿ ಬಲಿ, ಬೆಂಗಳೂರಿನಲ್ಲಿ 800 ಮಂದಿಗೆ ಸೋಂಕು
ಬೆಂಗಳೂರು: ಇಂದು ರಾಜ್ಯದಲ್ಲಿ 571 ಮಂದಿ ಬಿಡುಗಡೆಯಾಗಿದ್ದು, 1,498 ಮಂದಿಗೆ ಸೋಂಕು ಬಂದಿದೆ. 15 ಮಂದಿ ಮೃತಪಟ್ಟಿದ್ದಾರೆ.
ಒಟ್ಟು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 26,815ಕ್ಕೆ ಏರಿಕೆಯಾಗಿದೆ. ಈ ಪೈಕಿ 11,098 ಮಂದಿ ಬಿಡುಗಡೆಯಾಗಿದ್ದರೆ, 15,297 ಸಕ್ರಿಯ ಪ್ರಕರಣಗಳಿವೆ. ಒಟ್ಟು 416 ಮಂದಿ ಮೃತಪಟ್ಟಿದ್ದು, ಐಸಿಯುನಲ್ಲಿ 279 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಲ್ಲಿ ಎಷ್ಟು ಮಂದಿ?
ಬೆಂಗಳೂರು ನಗರ 800, ದಕ್ಷಿಣ ಕನ್ನಡ 83, ಧಾರವಾಡ 57, ಕಲಬುರಗಿ 51, ಬೀದರ್ 51, ಮೈಸೂರು 49, ಬಳ್ಳಾರಿ 45, ರಾಮನಗರ 37, ಉತ್ತರ ಕನ್ನಡ 35, ಶಿವಮೊಗ್ಗ 33, ಮಂಡ್ಯ 29, ಉಡುಪಿ 28, ಹಾಸನ 26, ಬಾಗಲಕೋಟೆ 26, ರಾಯಚೂರು 23, ವಿಜಯಪುರ 22, ಬೆಳಗಾವಿ 20, ತುಮಕೂರು 16, ಕೊಡಗು 14, ಯಾದಗಿರಿ 10, ದಾವಣಗೆರೆ, ಕೋಲಾರ, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು, ಕೊಪ್ಪಳದಲ್ಲಿ ತಲಾ 6, ಕೊಪ್ಪಳ 5, ಗದಗ 4, ಚಿಕ್ಕಬಳ್ಳಾಪುರ 3, ಚಿತ್ರದುರ್ಗ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಎಲ್ಲಿ ಎಷ್ಟು ಮಂದಿ ಬಿಡುಗಡೆ?
ಇಂದು ಒಟ್ಟು 571 ಮಂದಿ ಬಿಡುಗಡೆಯಾಗಿದ್ದಾರೆ. ಬೆಂಗಳೂರು ನಗರ 265, ಮೈಸೂರು 35, ಉಡುಪಿ 28, ಬಳ್ಳಾರಿ 27, ದಕ್ಷಿಣ ಕನ್ನಡ 26, ಹಾವೇರಿ 21, ಹಾಸನ 20, ಚಾಮರಾಜನಗರ 20, ಕಲಬುರಗಿ 19, ವಿಜಯಪುರ 18, ರಾಯಚೂರು 16, ಮಂಡ್ಯ 14, ರಾಮನಗರ 13, ಶಿವಮೊಗ್ಗ 12, ಗದಗ 9, ಕೋಲಾರ 7, ತುಮಕೂರು 6, ಉತ್ತರ ಕನ್ನಡ 5, ಬಾಗಲಕೋಟೆ 4, ಚಿತ್ರದುರ್ಗ 4, ಕೊಪ್ಪಳ ಇಬ್ಬರು ಬಿಡುಗಡೆಯಾಗಿದ್ದಾರೆ.

ಐಸಿಯುನಲ್ಲಿ ಎಷ್ಟು?
ಬೆಂಗಳೂರು ನಗರ 175, ಧಾರವಾಡ 15, ರಾಯಚೂರು 11, ಬಳ್ಳಾರಿ 10, ಕಲಬುರಗಿ 7, ಮೈಸೂರು 7, ಗದಗ 6, ಶಿವಮೊಗ್ಗ 6, ದಕ್ಷಿಣ ಕನ್ನಡ 5, ತುಮಕೂರು 5, ಮಂಡ್ಯ, ಹಾಸನ, ಬೆಳಗಾವಿ, ಬೀದರ್‌ನಲ್ಲಿ 4 ಮಂದಿ, ಬಾಗಲಕೋಟೆ 2, ಚಾಮರಾಜನಗರದಲ್ಲಿ 2 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply