ಮಹಿಳೆ ಮೇಲೆ ಅತ್ಯಾಚಾರವೆಸಗಿ ರಾಡ್‍ನಿಂದ ಹೊಡೆದು ಚಿತ್ರಹಿಂಸೆ

ರಾಯ್ಪುರ: ಮಹಿಳೆ ಮೇಲೆ ದುಷ್ಕರ್ಮಿಯೋರ್ವ ಅತ್ಯಾಚಾರವೆಸಗಿ, ಕಬ್ಬಿಣದ ರಾಡ್‍ನಿಂದ ಕ್ರೂರವಾಗಿ ಆಕೆಯ ತಲೆಗೆ ಹೊಡೆದಿರುವ ಭಯಾನಕ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ.

ಮೊದಲಿಗೆ ರಸ್ತೆ ಅಪಘಾತದಲ್ಲಿ 56 ವರ್ಷದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿದ್ದ ಜಾಂಜ್ಗೀರ್-ಚಂಪಾ ಜಿಲ್ಲೆಯ ಪೊಲೀಸರಿಗೆ ಮರಣೋತ್ತರ ಪರೀಕ್ಷೆ ವೇಳೆ ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದು, ಆಕೆಯ ಮೇಲೆ ಅತ್ಯಾಚಾರವೆಸಗಿ, ಕಳೆದ ಬುಧವಾರ ಬಹಳ ಕ್ರೂರವಾಗಿ ಥಳಿಸಿ ಹತ್ಯೆಗೈಯಲಾಗಿದೆ ಎಂದು ತಿಳಿದುಬಂದಿದೆ.

ನಂತರ ಈ ಘಟನೆ ಕುರಿತಂತೆ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ನ್ನು ಪರಿಶೀಲಿಸಿದಾಗ ಆಕೆಯ ಹೊಟ್ಟೆಗೆ ಒದ್ದು, ಕಣ್ಣಿಗೆ ಹೊಡೆದು ಕಬ್ಬಿಣದ ರಾಡ್‍ನಿಂದ ಯಾರೋ ಅಮಾನುಷವಾಗಿ ಹಲ್ಲೆ ನಡೆಸಿ ರಸ್ತೆಯಲ್ಲಿ ಎಳೆದೊಯ್ದಿರುವುದು ಕಂಡು ಬಂದಿದೆ.ಇದನ್ನೂ ಓದಿ:  ಓಲೈಕೆ ರಾಜಕಾರಣ ಗೊತ್ತಿಲ್ಲ: ಇಬ್ಬರು ಮಾಜಿ ಸಿಎಂಗಳಿಗೆ ಕುಟುಕಿದ  ಬೊಮ್ಮಾಯಿ

ಕೆಲವು ವರ್ಷಗಳ ಹಿಂದೆ ಮಹಿಳೆ ತನ್ನ ಪೋಷಕರನ್ನು ಕಳೆದುಕೊಂಡಿದ್ದು, ಸ್ಥಳೀಯರು ನೀಡುತ್ತಿದ್ದ ಆಹಾರವನ್ನು ತಿಂದು ಬದುಕುತ್ತಿದ್ದಳು. ಇದೀಗ ಈ ಸಂಬಂಧ ಪೊಲೀಸರು 31 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

31 ವರ್ಷದ ಆರೋಪಿಯನ್ನು ಕಿಶನ್ ಯಾದವ್ ಎಂದು ಗುರುತಿಸಲಾಗಿದ್ದು, ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸಂತ್ರಸ್ತೆ ಅತ್ಯಚಾರ ವಿರೋಧಿಸಿದರೂ ಆರೋಪಿ ಆಕೆಯ ಕೂದಲನ್ನು ಹಿಡಿದು ಧರಧರನೇ ಎಳೆದುಕೊಂಡು ಸಮೀಪದಲ್ಲಿದ್ದ ಪ್ಲಾಟ್‍ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾರತದಿಂದ ಸ್ಪರ್ಧಿಸಿದ್ದ ಕರ್ನಾಟಕದ ರಾಮು ರನ್ನರ್ ಅಪ್

Comments

Leave a Reply

Your email address will not be published. Required fields are marked *