ಹರಿಯಾಣದಲ್ಲಿ 5,000 ವರ್ಷಗಳ ಹಳೆಯ ಆಭರಣ ಕಾರ್ಖಾನೆ ಪತ್ತೆ

ಚಂಡೀಗಢ: ಕಳೆದ ೩೨ ವರ್ಷಗಳಿಂದ ಹರಿಯಾಣದ ರಾಖಿ ಗರ್ಹಿಯಲ್ಲಿ ಕಾರ್ಯನಿರ್ವಹಿಸುತ್ತಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಯು ೫,೦೦೦ ವರ್ಷಗಳ ಹಳೆಯ ಆಭರಣ ತಯಾರಿಕೆ ಕಾರ್ಖಾನೆಯನ್ನು ಪತ್ತೆ ಹಚ್ಚಿದ್ದು, ಇದು ಎಎಸ್‌ಐಯ ಅತೀ ದೊಡ್ಡ ಆವಿಷ್ಕಾರಗಳಲ್ಲಿ ಒಂದಾಗಿದೆ.

ರಾಖಿ ಗರ್ಹಿ ಒಂದು ಹಳ್ಳಿ ಮತ್ತು ಹರಿಯಾಣದ ಹಿಸಾರ್ ಜಿಲ್ಲೆಯ ಸಿಂಧೂ ಕಣಿವೆ ನಾಗರಿಕತೆಗೆ ಸೇರಿದ ಅತ್ಯಂತ ಹಳೆಯ ಪುರಾತನ ಸ್ಥಳಗಳಲ್ಲಿ ಒಂದಾಗಿದೆ. ೫,೦೦೦ ವರ್ಷಗಳ ಹಳೆಯ ಆಭರಣ ತಯಾರಿಕೆ ಕಾರ್ಖಾನೆಯಲ್ಲಿ ಕೆಲವು ಮನೆಗಳ ರಚನೆ ಹಾಗೂ ಅಡುಗೆ ಮನೆಗಳು, ಜೊತೆಗೆ ಸಾವಿರಾರು ವರ್ಷಗಳಿಂದ ಬಚ್ಚಿಡಲಾದ ತಾಮ್ರ, ಬಂಗಾರದ ಆಭರಣಗಳನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೇ ಇದೊಂದು ದೊಡ್ಡ ವ್ಯಾಪಾರ ಕೇಂದ್ರವಾಗಿರಬಹುದು ಎಂದು ಊಹಿಸಲಾಗಿದೆ. ಇದನ್ನೂ ಓದಿ: ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾಗೆ ಸದ್ಯಕ್ಕಿಲ್ಲ ಬಂಧನ

ಈ ಕುರಿತಂತೆ ಮಾತನಾಡಿರುವ ಎಎಸ್‍ಐ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಡಾ.ಸಂಜಯ್ ಮಂಜುಳ್ ಅವರು, ಕಳೆದ 20 ವರ್ಷಗಳಲ್ಲಿ ನಾವು ಸಿನೌಲಿ, ಹಸ್ತಿನಾಪುರ ಮತ್ತು ರಾಖಿಗರ್ಹಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ರಾಖಿಗರ್ಹಿಯ ಜನರು ಹಸ್ತಿನಾಪುರದ ಪೂರ್ವಜರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ ಮತ್ತು ಇದರಿಂದ ಸಂಸ್ಕೃತಿಯು ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದೆ ಅಂತ ಹೇಳಬಹುದು ಎಂದಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಸುತ್ತಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‍ಐ)ಯು ರಾಖಿ ಗರ್ಹಿಯಲ್ಲಿ ಸಾಕಷ್ಟು ಆವಿಷ್ಕಾರಗಳನ್ನು ಮಾಡಿದೆ, ಈ ನಾಗರಿಕತೆಯು ಅಭಿವೃದ್ಧಿಯತ್ತ ಸ್ಥಿರವಾಗಿ ಮುನ್ನಡೆಯುತ್ತಿರುವುದನ್ನು ಸೂಚಿಸುತ್ತದೆ.  ಇದನ್ನೂ ಓದಿ: ಮಸೀದಿಗಳ ಮೈಕ್ ತೆರವಿಗೆ ನಾಳೆಯೇ ಡೆಡ್‍ಲೈನ್ – ದೇಗುಲಗಳಲ್ಲಿ 3 ಬಾರಿ ಮಂತ್ರ ಘೋಷ

ಈ ಮುನ್ನ ೨೦೧೮ರಲ್ಲಿ ಉತ್ತರ ಪ್ರದೇಶದ ಸಿನೌಲಿಯಲ್ಲಿ ಪತ್ತೆಯಾಗಿದ್ದ ಕಂಚಿನ ಯುಗದ ದೊಡ್ಡ ಡಿಸ್ಕ್ (ಚಕ್ರದ ಬಂಡಿ)ಗಳು ಎಲ್ಲರ ಗಮನಸೆಳೆದಿತ್ತು. ಇದನ್ನು ಕೆಲವರು ಕುದುರೆ ರಥಗಳು ಎಂದು ತಿಳಿಸಿದ್ದರು. ಅದೇ ಉತ್ಖನನದ ಸ್ಥಳಗಳಲ್ಲಿ ಸ್ಮಶಾನಗಳೂ ಕಂಡುಬಂದಿದ್ದು, ಆಗಿನ ಜನರು ಮರಣದ ಬಳಿಕ ಜೀವನದ ಬಗ್ಗೆ ನಂಬಿಕೆ ಇಟ್ಟಿದ್ದರು ಎಂದು ತಿಳಿಯಲಾಗಿದೆ.

Comments

Leave a Reply

Your email address will not be published. Required fields are marked *