50 ದಿನ ನಡೆಯಲಿದೆ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್

ಬೆಂಗಳೂರು: ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್ ಸೀಸನ್ 8 ನಾಳೆ ಶುರುವಾಗುತ್ತಿದೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಆದರೆ ಬಿಗ್‍ಬಾಸ್ ಎಷ್ಟು ದಿನಗಳು ನಡೆಯಲಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಕೊರೊನಾ ಸಂಕಷ್ಟಕ್ಕೆ ಸಿಲುಕಿ ಅರ್ಧದಲ್ಲಿಯೇ ಮೊಟಕುಗೊಂಡಿದ್ದ ಕಾರ್ಯಕ್ರಮಕ್ಕೆ ಮತ್ತೆ ಪ್ರಾರಂಭವಾಗುತ್ತಿದೆ. ಶೂಟಿಂಗ್‍ಗೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ಬಿಗ್‍ಬಾಸ್ ಕಾರ್ಯಕ್ರಮ ಮತ್ತೆ ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ. ನಾಳೆ ಸಂಜೆ 6 ಗಂಟೆಯಿಂದ ಪ್ರಾರಂಭವಾಗಿ 5 ತಾಸು ಕಾರ್ಯಕ್ರಮ ಕಿಚ್ಚನ ನೀರೂಪಣೆಯಿಂದ ಪ್ರಾರಂಭವಾಗಲಿದೆ. ಇದನ್ನೂ ಓದಿ:  ನಾಳೆಯಿಂದ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್- ಸ್ಪರ್ಧಿಗಳ ಎಂಟ್ರಿ ಹೇಗಿರಲಿದೆ?

100 ದಿನದ ಈ ರಿಯಾಲಿಟಿ ಶೋ ಕೊರೊನಾದಿಂದಾಗಿ 72 ದಿನಕ್ಕೆ ಮೊಟಕುಗೊಳಿಸಲಾಗಿತ್ತು. ಅಂತಿಮಹಂತದ ಸ್ಪರ್ಧೆಗೆ 28 ದಿನ ಬಾಕಿ ಉಳಿದಿತ್ತು. ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಎಷ್ಟು ದಿನ ಬಿಗ್‍ಬಾಸ್ ಕಾರ್ಯಕ್ರಮ ನಡೆಯುತ್ತದೆ ಎನ್ನುವುದಕ್ಕೂ ಉತ್ತರ ಸಿಕ್ಕಿದೆ. ಬರೋಬ್ಬರಿ 50 ದಿನಗಳ ಕಾಲ ಈ ಕಾರ್ಯಕ್ರಮ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

ಕಿಚ್ಚಸುದೀಪ್ ನಿರೂಪಣೆಯಲ್ಲಿ ಸೆಕೆಂಡ್ ಇನ್ನಿಂಗ್ಸ್‍ನ ಮಹಾಸಂಚಿಕೆಯ ಮೊದಲ ದಿನದ ಮಹಾ ಸಂಚಿಕೆ ಮೂಡಿಬರ್ತಿದೆ. ಈ ಮೊದಲೇ ಮನೆಯಲ್ಲಿದ್ದ 12 ಸ್ಪರ್ಧಿಗಳು ಮಾತ್ರ ಬರುತ್ತಾರ ಅಥವಾ ಹೊಸಬರು ಎಂಟ್ರಿಕೊಡಲಿದ್ದಾರಾ ಎನ್ನುವುದು ಈಗ ಇರುವ ಕೂತುಹೊಲವಾಗಿದೆ. ಒಂಟಿ ಮನೆಯಲ್ಲಿ ಈ ಹಿಂದಿನ ಸಂಚಿಕೆಗಳಲ್ಲಿ ಇರುವುದಕ್ಕಿಂತ ವಿಭಿನ್ನವಾಗಿ ಏನೆಲ್ಲಾ ಇರಲಿದೆ. ಬಿಗ್‍ಬಾಸ್, ಮಸಾಲೆ, ಒಗ್ಗರಣೆ ಮನೆಯಲ್ಲಿ ಎಷ್ಟರ ಮಟ್ಟಿಗೆ ಮನರಂಜನೆ ನೀಡುತ್ತದೆ ಎಂಬುದನ್ನು ಇನ್ನು ನೋಡಹುದಾಗಿದೆ. ಬಿಗ್‍ಬಾಸ್ ಅಸಲಿ ಆಟ ನಾಳೆಯಿಂದ ಶುರುವಾಗುತ್ತಿದೆ.

Comments

Leave a Reply

Your email address will not be published. Required fields are marked *