ತೊಟ್ಟಿಲಲ್ಲಿ ಮಲಗಿದ್ದ ತಂಗಿಗೆ ಬಿಸಿಯಾದ ಫೋರ್ಕ್‍ನಿಂದ ಬರೆ ಹಾಕಿದ ಅಕ್ಕ

ಭುವನೇಶ್ವರ: 5 ವರ್ಷದ ಬಾಲಕಿಯೊಬ್ಬಳು 1 ತಿಂಗಳ ತನ್ನ ತಂಗಿಗೆ ಬಿಸಿಯಾದ ಫೋರ್ಕ್‍ನಿಂದ ಬರೆ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ಘಟನೆ ಒಡಿಶಾದಲ್ಲಿ ನಡೆದಿದೆ.

ಮಗುವಿನ ಮೈಮೇಲೆ ಇದ್ದ ಕೆಂಪು ಬಣ್ಣದ ಗುರುತು ನೋಡಿದ ಪೋಷಕರು ಕಂಗಾಲಾಗಿದ್ದರು. ಮಗು ಪ್ರತಿನಿತ್ಯವೂ ನೋವಿನಿಂದ ಅಳುತ್ತಿರುವುದನ್ನು ಕಂಡು ಏನು ಮಾಡಬೇಕೆಂದು ತೋಚದೆ, ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗು ಆರೋಗ್ಯವಾಗಿದೆ ಈ ಗುರುತು ಹೇಗೆ ಆಗುತ್ತಿದೆ ಎನ್ನುವುದನ್ನು ತಿಳಿದಿಲ್ಲ. ಆಗ ಮಗುವಿನ ಪೋಷಕರಿಗೆ ಮನೆಯೊಳಗೆ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸುವಂತೆ ಸಲಹೆ ನೀಡಿದ್ದಾರೆ.

ನಡೆದಿದ್ದೇನು ಗೊತ್ತಾ?:
ಆರಂಭದಲ್ಲಿ ಅವರು ಮಗುವಿಗೆ ಸೆಪ್ಸಿಸ್ ಅಥವಾ ಕೆಲವು ಅಲರ್ಜಿಯ ಕಾರಣದಿಂದಾಗಿ ಕಲೆಗಳು ಉಂಟಾಗುತ್ತವೆ ಎಂದು ಭಾವಿಸಿದ್ದರು. ಹೀಗಾಗಿ ಮಗುವಿಗೆ ಒಂದು ತಿಂಗಳ ಕಾಲ ಚಿಕಿತ್ಸೆ ನೀಡಲಾಯಿತು. ಆದರೆ ದೇಹದ ಬೇರೆ ಭಾಗಗಳಲ್ಲೂ ಗಾಯಗಳು ಹೆಚ್ಚುತ್ತಲೇ ಇತ್ತು. ಕೆಲವು ದಿನಗಳಾದಾಗ ಆ ಕೆಂಪು ಗಾಯವಾದ ಜಾಗದಲ್ಲಿ ಸುಟ್ಟು ಒಣಗಿದ ಗುರುತುಗಳಿದ್ದವು. ಹೀಗಾಗಿ ಇದು ಸುಟ್ಟ ಗಾಯವೆಂದು ವೈದ್ಯರಿಗೆ ಖಚಿತವಾಯಿತು. ಇದು ಯಾರ ಕೆಲಸವೆಂದು ತಿಳಿಯಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮಗುವಿನ ಪೋಷಕರಿಗೆ ಸೂಚಿಸಿದರು. ಇದನ್ನೂ ಓದಿ: ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ

ಮನೆಯಲ್ಲಿರುವ ಸಿಸಿಟಿವಿ ಫೂಟೇಜ್ ನೋಡಿದಾಗ ಅದರಲ್ಲಿ ತಮ್ಮ ಮಗಳು ಯಾರು ಇಲ್ಲದ ಸಮಯವನ್ನು ನೋಡಿ ತೊಟ್ಟಿಲಲ್ಲಿ ಮಲಗಿದ್ದ 1ತಿಂಗಳ ಮಗುವಿನ ಮೇಲೆ ಪ್ರತಿ ದಿನವೂ ಫೋರ್ಕ್ ಅನ್ನು ಬಿಸಿ ಮಾಡಿ ಸುಡುತ್ತಿದ್ದಳು. ಇದನ್ನು ನೋಡಿ ಅವರು ಆಘಾತಕ್ಕೊಳಗಾದರು. ತನ್ನ ತಾಯಿ ಮನೆಯ ಕೆಲಸದಲ್ಲಿ ನಿರತರಾಗಿದ್ದಾಗ, ಅಪ್ಪ ಹೊರಗೆ ಹೋಗಿದ್ದಾಗ ಅವರ ದೊಡ್ಡ ಮಗಳು ಅಡುಗೆಮನೆಗೆ ಹೋಗಿ, ಫೋರ್ಕ್ ಬಿಸಿ ಮಾಡಿ ಮಗುವಿನ ದೇಹದ ಮೇಲೆ ಆ ಚಮಚವನ್ನು ಇಡುತ್ತಿದ್ದಳು. ಆಕೆ ಹುಟ್ಟಿದ ಮೇಲೆ ಅಪ್ಪ-ಅಮ್ಮ ತನ್ನ ಬಗ್ಗೆ ಪ್ರೀತಿ ತೋರಿಸುತ್ತಿಲ್ಲ ಎಂದು ಆಕೆ ಈ ರೀತಿ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪತ್ನಿಯ ಪ್ರಿಯಕರನಿಂದ ಗಂಡನ ಕೊಲೆ

Comments

Leave a Reply

Your email address will not be published. Required fields are marked *