ಮಹಿಳೆಯರು ಧರಿಸಬಹುದಾದ ಬೋಲ್ಡ್ ಅಟ್ರಾಕ್ಟೀವ್ ನೈಟ್‌ವೇರ್‌ಗಳು

ಸಾಮಾನ್ಯವಾಗಿ ಗ್ರ್ಯಾಂಡ್ ಡ್ರೆಸ್‍ಗಳು ನಿಮ್ಮನ್ನು ಸುಂದರಗೊಳಿಸುತ್ತದೆ. ಆದರೆ ಸಿಂಪಲ್ ಡ್ರೆಸ್‍ಗಳು ನಿಮಗೆ ಕಂಫರ್ಟ್‍ಟೇಬಲ್ ಫೀಲ್ ನೀಡುತ್ತದೆ. ಸಿಂಪಲ್ ಡ್ರೆಸ್‍ಗಳಲ್ಲಿ ಕೆಲವೊಂದು ಡ್ರೆಸ್‍ಗಳು ಬಹಳ ಆಕರ್ಷಮಯವಾಗಿರುತ್ತದೆ. ಅವುಗಳಲ್ಲಿ ನೈಟ್ ಡ್ರೆಸ್ ಕೂಡ ಒಂದು. ಪ್ರತಿಯೊಬ್ಬ ಮಹಿಳೆ ಹಾಗೂ ಪುರುಷರು ಮಲಗುವಾಗ ಆರಾಮದಾಯಕವಾಗಿರುವ ಬಟ್ಟೆ ಧರಿಸಲು ಇಷ್ಟಪಡುತ್ತಾರೆ. ಅಂತವರಿಗೆ ನೈಟ್ ಸೂಟ್ ಬಹಳಷ್ಟು ರಿಲ್ಯಾಕ್ಸ್ ನೀಡುವುದರ ಜೊತೆಗೆ ಆರಾಮಾಗಿ ನಿದ್ದೆ ಮಾಡಲು ಸಹಾಯಕವಾಗಿದೆ. ಇದನ್ನೂ ಓದಿ:  ಸೂಪರ್ ಸ್ಟಾರ್ ರಜನಿಕಾಂತ್‍ಗೆ 71ನೇ ಹುಟ್ಟುಹಬ್ಬದ ಸಂಭ್ರಮ

 

ಕೆಲವರು ಮಲಗುವ ವೇಳೆ ಪೈಜಾಮ ಧರಿಸಲು ಇಷ್ಟ ಪಟ್ಟರೆ ಮತ್ತೆ ಕೆಲವರು ಶಾರ್ಟ್ ಡ್ರೆಸ್‍ಗಳನ್ನು ಧರಿಸಲು ಇಚ್ಛಿಸುತ್ತಾರೆ. ಅದರಲ್ಲಿಯೂ ಮಹಿಳೆಯರಿಗೆ ಬಾಡಿ ಹಗ್ಗರ್ಸ್, ಶೇಪ್ ವೇರ್ಸ್, ಒಳಉಡುಪುಗಳು, ಪೈಜಾಮಗಳು, ಚಳಿಗಾಲದಲ್ಲಿ ಧರಿಸಬಹುದಾದ ವಿಭಿನ್ನ ಸೂಟ್ ಹೀಗೆ ವೆರೈಟಿ ಡಿಸೈನ್ ಹಾಗೂ ಹಲವಾರು ಬಣ್ಣದ ನೈಟ್ ಡ್ರೆಸ್‍ಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಅವುಗಳ ಕುರಿತಂತೆ ಕೆಲವೊಂದಷ್ಟು ಮಾಹಿತಿ ಈ ಕೆಳಗೆ ನೀಡಲಾಗಿದೆ.

ಕಾಟನ್ ನೈಟ್ ವೇರ್ ಗೌವ್ನ್:
ಮಹಿಳೆಯರಿಗೆ ಕಾಟನ್ ನೈಟ್ ವೇರ್ ಬೆಸ್ಟ್ ಎಂದೇ ಹೇಳಬಹುದು. ಏಕೆಂದರೆ ಕಾಟನ್ ನೈಟ್ ವೇರ್ ಧರಿಸಲು ಬಹಳ ಸಾಫ್ಟ್ ಆಗಿದ್ದು, ನಿಮ್ಮ ದೇಹದ ಉಷ್ಣತೆಗೆ ಹೊಂದಿಕೊಳ್ಳುತ್ತದೆ. ಈ ನೈಟ್ ಡ್ರೆಸ್ ಮಹಿಳೆಯರಿಗೆ ಪಾದದವರೆಗೂ ಬರಲಿದ್ದು, ನಿಮಗೆ ಧರಿಸಲು ಕಂಫರ್ಟ್ ಫೀಲ್ ನೀಡುತ್ತದೆ. ಅಲ್ಲದೇ ಇದರಲ್ಲಿ ವೆರೈಟಿ ಡಿಸೈನ್ಸ್ ಲಭ್ಯವಿದ್ದು, ಆಫ್ ಸ್ಲೀವ್ಸ್ ಗೌನ್ ಸಹ ದೊರೆಯುತ್ತದೆ.

Cotton Nightwear Gown

ಒನ್ ಪೀಸ್ ನೈಟ್ ವೇರ್:
ಒನ್ ಪೀಸ್ ನೈಟ್ ವೇರ್ ಮಹಿಳೆಯರಿಗೆ ಸೆಕ್ಸಿ ಲುಕ್ ನೀಡುತ್ತದೆ. ಜೊತೆಗೆ ನಿಮಗೆ ಧರಿಸಲು ಆರಾಮದಾಯಕವಾಗಿರುತ್ತದೆ. ಅದರಲ್ಲಿಯೂ ಯುವತಿಯರಿಗೆ ಈ ಡ್ರೆಸ್ ಸಖತ್ ಕ್ಯೂಟ್ ಆಗಿ ಕಾಣಿಸುತ್ತದೆ. ಒನ್ ಪೀಸ್ ನೈಟ್ ವೇರ್ ವಿಶೇಷತೆ ಎಂದರೆ ಇದು ನಿಮ್ಮ ಮೊಣಕಾಲಿಗಿಂತ ಕೊಂಚ ಮೇಲೆ ಇರುತ್ತದೆ. ಇದನ್ನು ನೀವು ನಿಮ್ಮ ಬೆಡ್ ರೂಮ್‍ನಲ್ಲಿ ಯಾವಾಗ ಬೇಕಾದರು ಆರಾಮಾಗಿ ಧರಿಸಬಹುದಾಗಿದೆ. ಇದನ್ನೂ ಓದಿ: 1 ತಿಂಗಳೊಳಗೆ ಹಣ ಮರಳಿಸಿ – ದ್ವಾರಕೀಶ್‍ಗೆ ಕೋರ್ಟ್ ಸೂಚನೆ

One Piece Nightwear

ಸೈಡ್ ಸ್ಲೈಟ್ ಕಾಟನ್ ನೈಟಿ ಸ್ಲೀಪ್:
ಈ ನೈಟ್ ವೇರ್ ಧರಿಸಲು ನಿಮಗೆ ಮೃದು ಹಾಗೂ ತೆಳುವಾಗಿರುತ್ತದೆ. ಜೊತೆಗೆ ನಿಮಗೆ ರಿಚ್ ಲುಕ್ ನೀಡುತ್ತದೆ. ಈ ಡ್ರೆಸ್‍ನಲ್ಲಿ ಸ್ಲೀವ್ಸ್ ಇರುವುದಿಲ್ಲ. ಆದರೆ ಇದು ನಿಮಗೆ ಉತ್ತಮ ಶೇಪ್ ನೀಡುತ್ತದೆ. ಸೈಡ್ ಸ್ಲೈಟ್ ನೈಟಿ ನಿಮಗೆ ಎಲೆಸ್ಟಿಕ್‍ನಲ್ಲಿ ಸಹ ದೊರೆಯುತ್ತದೆ. ಇದು ನಿಮಗೆ ಬೋಲ್ಡ್ ಲುಕ್ ನೀಡುವುದರ ಜೊತೆಗೆ ಒಳಉಡಪನ್ನು ಧರಿಸದೇ ಕೂಡ ಇದನ್ನು ನೀವು ಧರಿಸಬಹುದಾಗಿದೆ.

Side Slit Cotton Nighty Slip

ಒನ್ ಪೀಸ್ ಹನಿಮೂನ್ ನೈಟ್‍ವೇರ್:
ಮಹಿಳೆಯರಿಗೆ ಹನಿಮೂನ್ ಬಹಳ ವಿಶೇಷವಾಗಿರುತ್ತದೆ. ಹನಿಮೂನ್‍ನಲ್ಲಿ ತಮ್ಮ ಪ್ರೀತಿಯ ಸಂಗಾತಿಯೊಂದಿಗೆ ಅಮೂಲ್ಯವಾದ ಸಮಯ ಕಳೆಯುತ್ತಾರೆ. ಈ ಸುಮಧುರ ಕ್ಷಣಗಳನ್ನು ಮತ್ತಷ್ಟು ಸುಂದರಗೊಳಿಸಲು ಒನ್ ಪೀಸ್ ಹನಿಮೂನ್ ನೈಟ್‍ವೇರ್ ಬಹಳ ಉತ್ತಮವಾಗಿರುತ್ತದೆ. ಈ ನೈಟ್‍ವೇರ್ ನಿಮಗೆ ರಿಚ್ ಲುಕ್ ನೀಡುವ ಜೊತೆಗೆ ಸಖತ್ ಅಟ್ರಾಕ್ಟಿವ್ ಆಗಿ ಕಾಣಿಸುತ್ತದೆ. ಕೆಂಪು ಬಣ್ಣದ ಲೇಸ್ಡ್ ಶೋಲ್ಡರ್ ಸ್ಟ್ರಿಪ್ ಮತ್ತು ಮೊಣಕಾಲುದ್ದ ಬರುತ್ತದೆ. ಇದನ್ನೂ ಓದಿ: ಐಟಂ ಸಾಂಗ್ ಕ್ಲಿಕ್ -‘ಪುಷ್ಪ’ದಲ್ಲಿ ಸಮಂತಾ ಫುಲ್ ಮಿಂಚಿಂಗ್

night wear

ಟ್ರಾನ್ಸ್‌ಪರೇಂಟ್‌ ನೈಟ್‍ವೇರ್:
ಬೋಲ್ಡ್ ಆಗಿ ಕಾಣಿಸಲು ಇಷ್ಟಪಡುವ ಮಹಿಳೆಯರಿಗೆ ಟ್ರಾನ್ಸ್‌ಪರೇಂಟ್‌ ನೈಟ್‍ವೇರ್ ಸೂಕ್ತವಾಗಿದೆ. ಟ್ರಾನ್ಸ್‌ಪರೇಂಟ್‌ ನೈಟ್‌ವೇರ್‌ನಲ್ಲಿ ಹಲವಾರು ಬ್ರಾಂಡ್, ಕಲರ್ ಹಾಗೂ ವೆರೈಟಿ ಡಿಸೈನ್ಸ್ ಇದ್ದು, ನಿಮಗೆ ಸೆಕ್ಸಿ ಹಾಗೂ ಸ್ಟೈಲಿಶ್ ಲುಕ್ ನೀಡುತ್ತದೆ.

night wear

Comments

Leave a Reply

Your email address will not be published. Required fields are marked *