ಗುಜರಾತ್‌ನಲ್ಲಿ ಕಲುಷಿತ ಆಯುರ್ವೇದಿಕ್ ಸಿರಪ್ ಸೇವಿಸಿ 5 ಮಂದಿ ಸಾವು

ಗಾಂಧೀನಗರ: ಗುಜರಾತ್‌ನ (Gujarat) ಖೇಡಾ ಜಿಲ್ಲೆಯಲ್ಲಿ ಮಿಥೈಲ್ ಆಲ್ಕೋಹಾಲ್ ಹೊಂದಿರುವ ಕಲುಷಿತ ಆಯುರ್ವೇದಿಕ್ ಸಿರಪ್ (Ayurvedic Syrup) ಸೇವಿಸಿದ ಶಂಕೆಯಿಂದ ಕಳೆದ ಎರಡು ದಿನಗಳಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಲ್ಮೇಘಸವ್ – ಅಸವ ಅರಿಷ್ಟ’ ಎಂಬ ಹೆಸರಿನ ಆಯುರ್ವೇದಿಕ್ ಸಿರಪ್ ಅನ್ನು ಬಿಲೋದರ ಗ್ರಾಮದ ಅಂಗಡಿಯಾತ ಕೌಂಟರ್‌ನಲ್ಲಿ ಸುಮಾರು 50 ಜನರಿಗೆ ಮಾರಾಟ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಪತಿಗೆ ಡಿವೋರ್ಸ್ ಕೊಟ್ಟು ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದೊಯ್ಯಲಿದ್ದಾಳಂತೆ ಅಂಜು!

ಗ್ರಾಮಸ್ಥರೊಬ್ಬರ ರಕ್ತದ ಮಾದರಿ ವರದಿಯು ಸಿರಪ್‌ಗೆ ಮಿಥೈಲ್ ಆಲ್ಕೋಹಾಲ್ ಅನ್ನು ಮಾರಾಟ ಮಾಡುವ ಮೊದಲು ಸೇರಿಸಿರುವುದು ದೃಢಪಟ್ಟಿದೆ ಎಂದು ಖೇಡಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗಧಿಯಾ ಹೇಳಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಸಿರಪ್ ಸೇವಿಸಿ ಐವರು ಪ್ರಾಣ ಕಳೆದುಕೊಂಡಿದ್ದರೆ, ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ನಾವು ಅಂಗಡಿ ವ್ಯಾಪಾರಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೂರತ್ ಕೆಮಿಕಲ್ ಫ್ಯಾಕ್ಟರಿ ಅಗ್ನಿ ಅವಘಡ – ರಾಸಾಯನಿಕ ಸ್ಥಾವರದ ಆವರಣದಲ್ಲಿ 7 ಸುಟ್ಟ ಶವಗಳು ಪತ್ತೆ

ಮಿಥೈಲ್ ಆಲ್ಕೋಹಾಲ್ ಒಂದು ವಿಷಕಾರಿ ವಸ್ತುವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.