KIALನಿಂದ ವ್ಯಾಲೆಂಟೈನ್ಸ್ ಡೇಗಾಗಿ 5.15 ಲಕ್ಷ ಕೆ.ಜಿ ಗುಲಾಬಿ ರಫ್ತು..!

ಚಿಕ್ಕಬಳ್ಳಾಪುರ: ವ್ಯಾಲೆಂಟೈನ್ಸ್ ಡೇ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5.15 ಲಕ್ಷ ಕೆಜಿ ಗುಲಾಬಿಗಳನ್ನ ರಫ್ತು ಮಾಡಲಾಗಿದೆ. ದೇಶದಲ್ಲಿಯೇ ಈ ಬಾರಿ ಅತಿ ಹೆಚ್ಚು ಗುಲಾಬಿ ಹೂ ರಫ್ತು ಮಾಡಿದ ಕೀರ್ತಿಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ.

ಒಟ್ಟು 18 ಏರ್ ಲೈನ್ಸ್ ಗಳ ಮೂಲಕ 5.15 ಲಕ್ಷ ಕೆ.ಜಿ ಹೂಗಳನ್ನ ಪ್ರಪಂಚದ 25 ಸ್ಥಳಗಳಿಗೆ ರಫ್ತು ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಹೂಗಳನ್ನ ರೈತರು ಬೆಳೆಯುವ ಕಾರಣ ವಿದೇಶಗಳು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ರಾಜ್ಯದ ಗುಲಾಬಿ ಹೂವಿಗೆ ಭಾರೀ ಬೇಡಿಕೆ ಇದೆ.

ಬೇಡಿಕೆಗೆ ಅನುಗುಣವಾಗಿ ರಫ್ತು ಮಾಡಲು ಸೌಲಭ್ಯ ಕೆಐಎಲ್ ಸಹಕಾರಿಯಾಗಿದ್ದು, ಸಿಂಗಾಪುರ್, ಕೌಲಾಲಂಪುರ್, ಲಂಡನ್, ಆಸ್ಟರ್ ಡ್ಯಾಂ, ಕುವೈತ್, ಆಕ್ಲೆಂಡ್, ಬೈರುತ್, ಮನಿಲಾ, ಮಸ್ಕತ್, ದುಬೈ ರಾಷ್ಟ್ರಗಳಿಗೆ ಗುಲಾಬಿ ರಫ್ತು ಮಾಡಲಾಗಿದೆ. ವಿದೇಶಿ ಮಾರುಕಟ್ಟೆಗಳಿಗೆ 2 ಲಕ್ಷ ಕೆಜಿಯ 7.3 ಮಿಲಿಯನ್ ಗುಲಾಬಿ ಹೂಗಳನ್ನ ರಫ್ತು ಮಾಡಲಾಗಿದೆ. ಇದನ್ನೂ ಓದಿ: ಹಿಜಬ್ ಧರಿಸಿ ಬರಲು ಬಿಡಲ್ಲ: ಸಚಿವ ಅಶ್ವತ್ಥ ನಾರಾಯಣ

ದೇಶಿಯ ಮಾರುಕಟ್ಟೆಗಳಿಗೆ 3.15 ಕೆಜಿ 6.5 ಮಿಲಿಯನ್ ಗುಲಾಬಿ ಹೂಗಳನ್ನ ರಫ್ತು ಮಾಡಲಾಗಿದೆ. ದೇಶಿ ಮಾರುಕಟ್ಟೆಗಳಾದ ದೆಹಲಿ, ಮುಂಬೈ, ಕೊಲ್ಕತ್ತಾ, ಗುವಾಹಟಿ ಹಾಗೂ ಚಂಡೀಗಢಕ್ಕೆ ರಫ್ತು ಮಾಡಲಾಗಿದೆ. ಇದನ್ನೂ ಓದಿ: ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಅವಘಡ – ವಿದ್ಯುತ್ ಉತ್ಪಾದನೆ ಸ್ಥಗಿತ

Comments

Leave a Reply

Your email address will not be published. Required fields are marked *