48 ಎಂಪಿ ಕ್ವಾಡ್ ಕ್ಯಾಮೆರಾ ಸೆಟಪ್ ಇರೋ ಪೋಕೋ ಫೋನ್ ಬಿಡುಗಡೆ

ನವದೆಹಲಿ: ಹಿಂದುಗಡೆ 4 ಕ್ಯಾಮೆರಾ ಇರುವ ಡ್ಯುಯಲ್ ಸಿಮ್ ಫೋನನ್ನು ಪೋಕೋ ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕ್ಸಿಯೋಮಿಯಿಂದ ಪ್ರತ್ಯೇಕಗೊಂಡಿರುವ ಪೋಕೋ ಎಂ2 ಪ್ರೊ ಹೆಸರಿನಲ್ಲಿ ಮೂರು ಮಾದರಿಯ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಿದ್ದು, ಬೆಲೆ 14 ಸಾವಿರದಿಂದ ಆರಂಭವಾಗಲಿದೆ. ಫೋನ್ 5000 ಎಂಎಚ್ ಬ್ಯಾಟರಿ, 33W ಫಾಸ್ಟ್ ಚಾರ್ಜಿಂಗ್ ಫೀಚರ್ ನಲ್ಲಿ ಹೊಸ ಸ್ಮಾರ್ಟ್‍ಫೋನ್ ಸಿಗಲಿದೆ.

ಕ್ಸಿಯೋಮಿಯಿಂದ ಪ್ರತ್ಯೇಕಗೊಂಡಿರುವ ಪೋಕೋ ಭಾರತದಲ್ಲಿ ಲಾಂಚ್ ಮಾಡುತ್ತಿರುವ ಮೂರನೇ ಸ್ಮಾರ್ಟ್‍ಫೋನ್ ಇದಾಗಿದೆ. ಜುಲೈ 14ರಿಂದ ಫ್ಲಿಪ್‍ಕಾರ್ಟ್ ನಲ್ಲಿ ಈ ಮೊಬೈಲ್ ಖರೀದಿಸಬಹುದಾಗಿದೆ. ನೀಲಿ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಪೋಕೋ ಎಂ2 ಪ್ರೊ ಲಭ್ಯವಿದೆ.

ಯಾವುದಕ್ಕೆ ಎಷ್ಟು ಬೆಲೆ?
1. 4 ಜಿಬಿ ರ‍್ಯಾಮ್ +64 ಜಿಬಿ ಆಂತರಿಕ ಮೆಮೊರಿ ಬೆಲೆ 13,999 ರೂಪಾಯಿ
2. 6 ಜಿಬಿ ರ‍್ಯಾಮ್ +64 ಜಿಬಿ ಆಂತರಿಕ ಮೆಮೊರಿ ಬೆಲೆ 14,999 ರೂಪಾಯಿ
3. 6 ಜಿಬಿ ರ‍್ಯಾಮ್ +128 ಜಿಬಿ ಆಂತರಿಕ ಮೆಮೊರಿ ಬೆಲೆ 16,999 ರೂಪಾಯಿ

ಹಿಂದುಗಡೆ 48 ಎಂಪಿ ಕ್ವಾಡ್ ಕ್ಯಾಮೆರಾ: ಪೋಕೋ ಎಂ2 ಪ್ರೊ ಫೋನಿನಲ್ಲಿ 48 ಮೆಗಾಪಿಕ್ಸಲ್ ನ ಕ್ವಾಡ್ ರಿಯಲ್ ಕ್ಯಾಮೆರಾ ಸೆಟಪ್ ಇದೆ. ರಿಯರ್ ನಲ್ಲಿ 48 ಎಂಪಿಯ ಪ್ರೈಮರಿ ಸೆನ್ಸರ್, 8ಎಂಪಿ ವೈಡ್ ಆ್ಯಂಗಲ್ ಸೆನ್ಸರ್, 5 ಎಂಪಿ ಮೈಕ್ರೋ ಸೆನ್ಸರ್ ಮತ್ತು 2ಎಂಪಿ ಡೆಪ್ತ್ ಸೆನ್ಸರ್ ಕ್ಯಾಮೆರಾವನ್ನು ನೀಡಲಾಗಿದೆ. ಕ್ಯಾಮೆರಾ ಆ್ಯಪ್‍ನಲ್ಲಿ ಪ್ರೊ ಕಲರ್ ಮೋಡ್, ಪ್ರೊ ವಿಡಿಯೋ ಮೋಡ್ ಮತ್ತು ರಾ ಮೋಡ್ ಆಪ್ಶನ್‍ಗಳಿವೆ. ಸೆಲ್ಫಿಗಾಗಿ ಮುಂದುಗಡೆ 16 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಫ್ರಂಟ್ ಕ್ಯಾಮೆರಾದ ನೈಟ್ ಮೋಡ್ ಫೀಚರ್ ಸಹ ಇದೆ.

ಇತರೆ ಫೀಚರ್ಸ್: ಪೋಕೋ ಎಂ2 ಪ್ರೊ 6.67 ಇಂಚಿನ ಐಪಿಎಸ್ ಎಲ್‍ಸಿಡಿ ಡಿಸ್‍ಪ್ಲೇ (1080*2400, 395 ಪಿಪಿಐ). ಗೊರಿಲ್ಲ ಗ್ಲಾಸ್ 5, ಆಂಡ್ರಾಯ್ಡ್ 10, ಕ್ವಾಲಕಂ ಸ್ನಾಪ್‍ಡ್ರಾಗನ್ 720 ಅಕ್ಟಾಕೋರ್ ಪ್ರೊಸೆಸರ್, 5 ಗೊರಿಲ್ಲಾ ಗ್ಲಾಸ್, 209 ಗ್ರಾಂ ತೂಕ ಹೊಂದಿದೆ. 33W ಫಾಸ್ಟ್ ಚಾರ್ಜಿಂಗ್ ಇರುವ ಕಾರಣ ಕೇವಲ ಅರ್ಧಗಂಟೆಯಲ್ಲಿ ಶೇ.50ರಷ್ಟು(2500 ಎಂಎಎಚ್) ಬ್ಯಾಟರಿ ಚಾರ್ಜ್ ಆಗುತ್ತದೆ ಎಂದು ಕಂಪನಿ ತಿಳಿಸಿದೆ.

Comments

Leave a Reply

Your email address will not be published. Required fields are marked *