ಕಟ್ಟಡ ಕಾರ್ಮಿಕರ ಹೆಲ್ತ್ ಚೆಕಪ್‌ನಲ್ಲೂ 47.99 ಕೋಟಿ ಗೋಲ್ಮಾಲ್‌ – ಲೋಕಾಯುಕ್ತಕ್ಕೆ ಬಿಜೆಪಿ ದೂರು

– ಸಚಿವ ಸಂತೋಷ್‌ ಲಾಡ್‌ ರಾಜೀನಾಮೆಗೆ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಮುಡಾ ಹಗರಣ, ವಾಲ್ಮೀಕಿ ಹಗರಣ, ಕೋವಿಡ್‌ ಹಗರಣಗಳು ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಮತ್ತೊಂದು ಅಕ್ರಮ ಆರೋಪ ಕೇಳಿಬಂದಿದೆ. ಕಟ್ಟಡ ಕಾರ್ಮಿಕರ (Construction Workers) ಆರೋಗ್ಯ ತಪಾಸಣೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ನಿಯೋಗ ಲೋಕಾಯುಕ್ತಕ್ಕೆ ದೂರು ನೀಡಿದೆ.

ಕಟ್ಟಡ ಕಾರ್ಮಿಕರು ಮತ್ತು ಅವರ ಮಕ್ಕಳ ಹೆಲ್ತ್ ಚೆಕಪ್‌ನಲ್ಲಿ (Health Check Up) ಭಾರೀ ಗೋಲ್ಮಾಲ್ ನಡೆದಿದೆ. 47.99 ಕೋಟಿ ರೂ.ಗಳನ್ನ ಗುಳುಂ ಮಾಡಲಾಗಿದೆ. ಯಾವುದೇ ಹೆಲ್ತ್ ಚೆಕಪ್ ನಡೆಸದೇ ಹಣ ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ನಿಯೋಗ ಆರೋಪಿಸಿದೆ. ಇದನ್ನೂ ಓದಿ: ಇನ್ಸ್ಟಾದಲ್ಲೇ 3 ವರ್ಷ ಲವ್; ಅಡ್ರೆಸ್ ಇಲ್ಲದ ಕಲ್ಯಾಣದ ಮಂಟಪದಲ್ಲಿ ಮದುವೆ ಫಿಕ್ಸ್ ಮಾಡಿ ವಧು ಎಸ್ಕೇಪ್!

ಅಲ್ಲದೇ ಹೆಲ್ತ್ ಚೆಕಪ್ ಹೆಸರಲ್ಲಿ ಒಂದೊಂದಕ್ಕೆ ಒಂದೊಂದು ರೀತಿಯಲ್ಲಿ ಬಿಲ್ ಮಾಡಿದ್ದಾರೆ. ಅರ್ಹತೆ ಇಲ್ಲದ ಕಂಪನಿಗೆ ಟೆಂಡರ್ ಕೊಟ್ಟು ಹಣ ಹೊಡೆದಿದ್ದಾರೆ. ಇದಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇರ ಹೊಣೆ ಹೊತ್ತು ರಾಜೀನಾಮೆ ನೀಡ್ಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎ.ನ್‌ ರವಿಕುಮಾರ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: AI ಬಳಸಿ ನನ್ನ ಖಾಸಗಿ ವೀಡಿಯೋ ಲೀಕ್ ಮಾಡಿದ್ದಾರೆ – ನಟಿ ಪ್ರಗ್ಯಾ ನಗ್ರಾ ಆರೋಪ