ಬೆಂಗಳೂರು: ರಾಜ್ಯದಲ್ಲಿ ಇಂದು 451 ಹೊಸ ಕೊರೊನಾ ಕೇಸ್ ದಾಖಲಾಗಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕೋವಿಡ್-19 ಮರಣ ಪ್ರಮಾಣ ಶೇ.1.99 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.0.37 ರಷ್ಟಿದೆ.

ರಾಜ್ಯದಲ್ಲಿ 1,455 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 10,395 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,80,621 ಮಂದಿಗೆ ಕೊರೊನಾ ಬಂದಿದೆ. 29,32,322 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದನ್ನೂ ಓದಿ: ಪಟಾಕಿ, ವಾದ್ಯದ ಸದ್ದಿಗೆ ಬೆದರಿದ ಆನೆ – ಜಂಬೂ ಸವಾರಿ ಮೆರವಣಿಗೆ ಸ್ಥಗಿತ

ಇಂದು ರಾಜ್ಯದಲ್ಲಿ ಒಟ್ಟು 1,37,417 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,20,045 ಸ್ಯಾಂಪಲ್ (ಆರ್‍ಟಿ ಪಿಸಿಆರ್ 94,506 + 25,539 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಸೋಂಕಿನ ಸಂಖ್ಯೆ ನೂರಕ್ಕಿಂತ ಕಡಿಮೆ ದಾಖಲಾಗಿದೆ. ಬೆಂಗಳೂರಿನಲ್ಲಿ ಇಂದು 187 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 3 ಜನ ಮರಣ ಹೊಂದಿದ್ದಾರೆ. 1,009 ಜನ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 187, ಬೀದರ್ 1, ಚಾಮರಾಜನಗರ 3, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 3, ಚಿತ್ರದುರ್ಗ 4, ದಕ್ಷಿಣ ಕನ್ನಡ 27, ದಾವಣಗೆರೆ 2, ಧಾರವಾಡ 5, ಗದಗ 1, ಹಾಸನ 43, ಹಾವೇರಿ 0, ಕಲಬುರಗಿ 0, ಕೊಡಗು 14, ಕೋಲಾರ 4, ಕೊಪ್ಪಳ 0, ಮಂಡ್ಯ 11, ಮೈಸೂರು 48, ರಾಯಚೂರು 0, ರಾಮನಗರ 1, ಶಿವಮೊಗ್ಗ 9, ತುಮಕೂರು 17, ಉಡುಪಿ 21, ಉತ್ತರ ಕನ್ನಡ 37 ವಿಜಯನಗರ ಮತ್ತು ಯಾದಗಿರಿಯಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಟಾಮ್ ಬಾಯ್ ಲುಕ್‍ನಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್

Leave a Reply