44 ಯೋಧರು ಹುತಾತ್ಮ- ಸಾಮಾಜಿಕ ಜಾಲತಾಣದಲ್ಲಿ ದುಷ್ಟರ ಸಂಭ್ರಮ

ಪುಲ್ವಾಮ: ಭಾರತಮಾತೆಗೆ ಗುರುವಾರ ಕರಾಳ ದಿನವಾಗಿದೆ. ಆದ್ರೆ ಕೆಲ ದುಷ್ಟಬುದ್ಧಿಯ ಉಗ್ರ ಬೆಂಬಲಿಗರು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಈ ದುರಂತವನ್ನು ಸಂಭ್ರಮಿಸಿದ್ದಾರೆ.

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸಹಿತ ಉಗ್ರಬೆಂಬಲಿಗ ರಾಷ್ಟ್ರಗಳ ಮಂದಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾದ ಭಾರತೀಯ ಯೋಧರ ಹತ್ಯೆ ಸುದ್ದಿಯನ್ನು ಸಂಭ್ರಮಿಸಿದ್ದಾರೆ.

ಭಾರತಕ್ಕೆ ತಕ್ಕ ಶಾಸ್ತಿಯಾಗಿದೆ. ಹ್ಯಾಪಿ ವ್ಯಾಲೆಂಟೈನ್ಸ್ ಡೇ. ಈಗ ಸಾವಿನ ಸಂಖ್ಯೆ 40 ಆಗಿದ್ದು, ಇನ್ನೂ ಮುಂದುವರಿಯಲಿದೆ. ಕಾಶ್ಮೀರಕ್ಕೆ ಇಂದು ಸಂಭ್ರಮದ ದಿನ. ಹಿಂದೂಗಳಿಗೆ ದೀಪಾವಳಿಯ ಶುಭಾಶಯಗಳು ಎಂದೆಲ್ಲಾ ಸಂದೇಶ ಹರಿಬಿಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪುರದಲ್ಲಿ ಗುರುವಾರ ನಡೆಸಿದ ಉಗ್ರರ ಆತ್ಮಾಹುತಿ ದಾಳಿಗೆ 44 ಮಂದಿ ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವು ಯೋಧರು ಸ್ಥಿತಿ ಗಂಭೀರವಾಗಿದೆ. ಸೇನಾ ವಾಹನದಲ್ಲಿದ್ದು ವೀರ ಮರಣವನ್ನಪ್ಪಿದ ಧೀರ ಯೋಧರ ಹೆಸರಿನ ಪಟ್ಟಿ ಸಿಕ್ಕಿದ್ದು, ಅದು ಈ ಕೆಳಗಿನಂತಿದೆ.

* ಜಮಾಲ್ ಸಿಂಗ್, ನಾಸೀರ್ ಅಹಮ್ಮದ್, ಸಿಖ್ವಿಂದರ್ ಸಿಂಗ್, ರೋಹಿತಾಶ್ ಲಂಬಾ
* ತಿಲಕ್ ರಾಜ್, ಭಗೀರಥ ಸಿಂಗ್, ಬೀರೇಂದ್ರ ಸಿಂಗ್, ಅವದೇಶ್ ಕುಮಾರ್ ಯಾದವ್
* ನಿತಿನ್ ಸಿಂಗ್ ರಾಥೋರ್, ರತನ್ ಕುಮಾರ್ ಠಾಕೂರ್, ಸುರೇಂದ್ರ ಯಾದವ್
* ಸಂಜಯ್ ಕುಮಾರ್ ಸಿಂಗ್, ರಾಮ್ ವಕೀಲ್, ಧರ್ಮಚಂದ್ರ, ಬೇಲ್‍ಖರ್ ಟಾಕಾ
* ಶಾಮ್ ಬಾಬು, ಅಜಿತ್ ಕುಮಾರ್ ಆಜಾದ್, ಪ್ರದೀಪ್ ಸಿಂಗ್, ಸಂಜಯ್ ರಜಪೂತ್

* ಜೀತ್‍ರಾಮ್, ಕೌಶಲ್‍ಕುಮಾರ್, ಅಮಿತ್ ಕುಮಾರ್, ಬಿಜಯ್ ಕುಮಾರ್
* ಕುಲವಿಂದರ್ ಸಿಂಗ್, ವಿಜಯ್ ಸೋರಂಗ್, ವಸಂತ್ ಕುಮಾರ್, ಗುರು, ಶುಭಂ ಅನಿರಂಗ್
* ಅಮರ್ ಕುಮಾರ್, ಅಜಯ್ ಕುಮಾರ್, ಮಣಿಂದರ್ ಸಿಂಗ್, ರಮೇಶ್ ಯಾದವ್
* ಪ್ರಸನ್ನ ಕುಮಾರ್, ಹೇಮರಾಜ್, ಬಬಲಾಶ್ ಶಾಂತ್ರಾ, ಅಶ್ವಿನಿ ಕುಮಾರ್, ಪ್ರದೀಪ್ ಕುಮಾರ್
* ಸುಧೀರ್ ಕುಮಾರ್ ಬನ್ಸಾಲ್, ರವೀಂದ್ರ ಸಿಂಗ್, ಬಷುಮಾತ್ರೆ, ಮಹೇಶ್ ಕುಮಾರ್, ಗುರ್ಜರ್

ಗೋರಿಪುರ ಪ್ರದೇಶದಲ್ಲಿ ಉಗ್ರರು ಸುಧಾರಿತ ಸ್ಫೋಟಕ ಬಳಸಿ ಸಿಆರ್‍ಪಿಎಫ್ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಸ್ಫೋಟದ ಬಳಿಕ ಸ್ಥಳದಲ್ಲಿ ಗುಂಡಿನ ದಾಳಿ ಕೂಡ ನಡೆದಿದೆ. ಸುಧಾರಿತ ಸ್ಫೋಟಕ ಅಳವಡಿಸಿದ್ದ ಕಾರನ್ನು ಸಿಆರ್‍ಪಿಎಫ್ ಯೋಧರಿದ್ದ ವಾಹನಕ್ಕೆ ಗುದ್ದಿಸಿ ದಾಳಿ ನಡೆಸಿದ್ದಾರೆ. ಸ್ಫೋಟದ ತೀವ್ರತೆಗೆ ಯೋಧರ ದೇಹಗಳು ಛಿದ್ರ, ಛಿದ್ರವಾಗಿವೆ. ದಾಳಿಗೆ ಬಳಸಲಾಗಿರುವ ಆಟೋದ ಗುರುತು ಸಿಗದಷ್ಟು ಜಖಂ ಆಗಿದೆ. ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ಭಾರತದಲ್ಲಿ ಉಗ್ರರ ದೊಡ್ಡ ದಾಳಿ ನಡೆಯಲಿದೆ ಅಂತ ಅಮೆರಿಕ ಬೇಹುಗಾರಿಕೆ ಸಂಸ್ಥೆ ಎಚ್ಚರಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *