41 ದಿನಗಳ ಬಳಿಕ ಸೀಲ್‍ಡೌನ್‍ನಿಂದ ಮುಕ್ತವಾದ ಗದಗನ ರಂಗನವಾಡಿ ಗಲ್ಲಿ

ಗದಗ: ನಗರದ ರಂಗನವಾಡಿ ಗಲ್ಲಿ 41 ದಿನಗಳ ಬಳಿಕ ಸೀಲ್‍ಡೌನ್ ನಿಂದ ಮುಕ್ತವಾಗಿದೆ.

ರಂಗನವಾಡಿ ಗಲ್ಲಿಯ 80 ವರ್ಷದ ವೃದ್ಧೆ ಕೊರೊನಾದಿಂದ ಏಪ್ರಿಲ್ 6ರಂದು ಸಾವನ್ನಪ್ಪಿದ್ದರು. ಇದೇ ಗಲ್ಲಿಯ ಐವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಐವರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 41 ದಿನಗಳ ಬಳಿಕ ರಂಗನವಾಡಿ ಗಲ್ಲಿಯನ್ನು ಕಂಟೈನ್‍ಮೆಂಟ್ ಝೋನ್ ನಿಂದ ಕೈ ಬಿಡಲಾಗಿದೆ.

ಸೀಲ್‍ಡೌನ್ ಮಾಡಿದ ಆರಂಭದ ದಿನಗಳಲ್ಲಿ ಜನರು ತಮ್ಮನ್ನು ಹೊರಗೆ ಕಳುಹಿಸುವಂತೆ ಪ್ರತಿಭಟನೆ ಮಾಡಿದ್ದರು. ಜಿಲ್ಲಾಡಳಿತ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜನರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.

Comments

Leave a Reply

Your email address will not be published. Required fields are marked *