ಸಿಲಿಕಾನ್ ಸಿಟಿಯಲ್ಲಿವೆ 40 ಡೇಂಜರ್ ಸ್ಪಾಟ್‍ಗಳು!

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿ ಈ ಸುದ್ದಿಯನ್ನ ನೋಡಲೇಬೇಕು. ಯಾಕಂದ್ರೆ ಅತಿ ಹೆಚ್ಚು ಅಪಘಾತಗಳು ಜರುಗುವ 40 ಸ್ಪಾಟ್‍ಗಳನ್ನು ಡೇಂಜರ್ ಝೋನ್ ಅಂತಾ ಸಂಚಾರಿ ಪೊಲೀಸರು ಗುರುತಿಸಿದ್ದಾರೆ. ನಗರದಲ್ಲಿ ವೆಹಿಕಲ್‍ನಲ್ಲಿ ಓಡಾಡೋದಂದ್ರೆ ಮೈಯೆಲ್ಲಾ ಕಣ್ಣಾಗಿರಬೇಕು. ಸ್ವಲ್ಪ ಕೇರ್‍ಲೆಸ್ ಆದ್ರೂನು ಚಿಕ್ಕಪುಟ್ಟ ಅನಾಹುತ ನಡೆಯುತ್ತದೆ. ಇದರ ನಡುವೆ ನಮ್ಮ ಸಂಚಾರಿ ಪೊಲೀಸರು 22 ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಗಳ ಸುಮಾರು 40 ಸ್ಥಳಗಳನ್ನ ಡೇಂಜರ್ ಸ್ಪಾಟ್ ಅಂತಾ ಗುರುತಿಸಿದ್ದಾರೆ.

ಕಳೆದ ಕೆಲ ವರ್ಷಗಳಲ್ಲಿ ಈ ರಸ್ತೆಗಳಲ್ಲಿ ಆದ ಅಪಘಾತದ ಪ್ರಮಾಣಗಳನ್ನ ಆಧರಿಸಿ ಡೇಂಜರ್ ಸ್ಪಾಟ್ ಅಂತಾ ಗುರುತಿಸಿಲಾಗಿದೆ. ನಗರದ ಪ್ರಮುಖ ಡೇಂಜರ್ ಸ್ಪಾಟ್‍ಗಳು ಹೀಗಿವೆ. ಸಿಲ್ಕ್ ಬೋರ್ಡ್ ಫ್ಲೈಓವರ್ ಕೆಳಗಿನ ಪ್ರದೇಶ, ಸಿಂಗಸಂದ್ರ ಬಸ್ ಸ್ಟಾಪ್, ಹೊಸೂರು ರಸ್ತೆಯ ನಾಗನಾಥಪುರ, ವರ್ತೂರು ಲೇಕ್ ರೋಡ್, ಏರ್ ಪೋರ್ಟ್ ರಸ್ತೆ, ಬಾಣಸವಾಡಿಯ ಔಟರ್ ರಿಂಗ್ ರಸ್ತೆ, ಓಲ್ಡ್ ಏರ್ ಪೋರ್ಟ್ ರೋಡ್, ರಾಮಮೂರ್ತಿನಗರ, ನಾಯಂಡಹಳ್ಳಿ ಜಂಕ್ಷನ್ ಹೀಗೆ 40 ಡೇಂಜರ್ ಸ್ಪಾಟ್‍ಗಳನ್ನ ಗುರ್ತಿಸಲಾಗಿದೆ.

ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಟ್ರಾಫಿಕ್ ಇಲಾಖೆ ಈ ಡೇಂಜರ್ ಝೋನ್‍ಗಳಲ್ಲಿ ಆಕ್ಸಿಡೆಂಟ್ ಪ್ರಮಾಣವನ್ನ ತಗ್ಗಿಸೊ ಕೆಲಸಕ್ಕೆ ಮುಂದಾಗಿದೆ. ನೀವು ಈ ರಸ್ತೆಯಲ್ಲಿ ಸಂಚಾರ ಮಾಡ್ತಿದ್ರೆ, ತುಸು ಜಾಗರೂಕರಾಗಿರಿ. ಅಲ್ಲದೇ ಪೊಲೀಸರ ನೀಡುವ ಸಲಹೆಗಳನ್ನು ಪಾಲಿಸಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *