40 ವರ್ಷಗಳ ಅನುಭವದಲ್ಲಿ ಡ್ರಗ್ಸ್ ಇರೋದು ನಾನು ಕಂಡಿಲ್ಲ: ಸುಮಲತಾ

– ಯುವಜನರು ದುಶ್ಚಟಗಳ ದಾಸರಾಗೋದು ತಪ್ಪು

ಬೆಂಗಳೂರು: 40 ವರ್ಷಗಳ ಅನುಭವದಲ್ಲಿ ಡ್ರಗ್ಸ್ ಇರೋದು ನಾನು ಕಂಡಿಲ್ಲ ಎಂದು ನಟಿ ಮತ್ತು ಮಂಡ್ಯ ಸಂಸದೆ ಸುಮಲತಾ ಅವರು ಹೇಳಿದ್ದಾರೆ.

ಇಂದು ಸ್ಯಾಂಡಲ್‍ವುಡ್‍ನಲ್ಲಿ ಖ್ಯಾತ ಗಾಯಕ ಎಸ್‍ಪಿಬಿಯವರು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನ ಕಾರ್ಯಕ್ರಮವನ್ನು ಆಯೋಚಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಡ್ರಗ್ ಮಾಫಿಯಾ ಬಗ್ಗೆ ಮಾತನಾಡಿದ ಸುಮಲತಾ ಅವರು, ಯುವಜನರು ದುಶ್ಚಟಗಳ ದಾಸರಾಗುವುದು ತಪ್ಪು ಎಂದು ತಿಳಿಸಿದರು.

40 ವರ್ಷಗಳ ಅನುಭವದಲ್ಲಿ ಡ್ರಗ್ಸ್ ಇರೋದು ನಾನು ಕಂಡಿಲ್ಲ. ಹಾಗಂತ ಇಲ್ವೇ ಇಲ್ಲ ಅಂತಲ್ಲ, ಆದರೆ ನನ್ನ ಗಮನಕ್ಕೆ ಇಂತಹ ವಿಚಾರಗಳು ಬಂದಿಲ್ಲ. ನಮಗೆ ಗೊತ್ತಿಲ್ಲದ ವಿಷಯಗಳನ್ನು ಮಾತಾಡೋದು ತಪ್ಪಾಗುತ್ತೆ. ಡ್ರಗ್ಸ್ ನ ಕಂಟ್ರೋಲ್ ಮಾಡೋಕೆ ಅಂತಾಲೇ ಏಜೆನ್ಸಿ ಇದೆ. ಖಂಡಿತ ಯಾರೂ ಇದರಲ್ಲಿ ಪಾಲ್ಗೊಂಡಿದ್ದಾರೋ ಅವರನ್ನು ತನಿಖೆ ಮಾಡಲಬೇಕು ಎಂದು ಅಗ್ರಹಿಸಿದರು.

ನಾನು ಒಬ್ಬ ಸೆಲೆಬ್ರಿಟಿ ಆಗಿ ಅಲ್ಲ. ಒಬ್ಬ ತಾಯಿಯಾಗಿ ಹೇಳುತ್ತಿದ್ದೇನೆ, ಯುವಜನರು ದುಶ್ಚಟಗಳ ದಾಸರಾಗುವುದು ತಪ್ಪು ಎಂದರು. ಚಿತ್ರರಂಗ ಅಂತಲ್ಲಾ ಎಲ್ಲಾ ಕಡೆ ಈ ಡ್ರಗ್ಸ್ ಮಾಫಿಯಾ ಇದೆ ಎಂದು ಸುಮಲತಾ ಅವರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *