ಅನ್ಯಧರ್ಮದ ಯುವತಿಯನ್ನ ಮದುವೆಯಾಗಿದಕ್ಕೆ ಕೊಲೆ – ಆರೋಪಿಗಳ ಬಂಧನ!

ಕಲಬುರಗಿ: ಮಾರ್ಚ್ 3 ರಂದು ನಗರದ ಪಿಎನ್‍ಟಿ ಬಡಾವಣೆಯ ಗಣೇಶ್ ನಗರದಲ್ಲಿ ಪ್ರೀತಂ ಬನ್ನಿಕಟ್ಟಿ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಕೊಲೆ ಪ್ರಕಾರ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಪಿ ಅಡ್ಡೂರು ಶ್ರೀನಿವಾಸಲು, ಜೇವರ್ಗಿ ಕಾಲೋನಿ ನಿವಾಸಿ ಅರವಿಂದ ಡೆಂಕಿ, ಶಿವಪುತ್ರಪ್ಪ ಡೆಂಕಿ, ಮಹೇಬೂಬ್ ಮಂಜೂರ್ ಅಲಿ ಶೇಕ್ ಮತ್ತು ಮದನ್‍ಗೋಪಾಲ್ ಸೇರಿದಂತೆ ನಾಲ್ವರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಚಾಕು, ಸ್ಕೂಟಿ ಮತ್ತು ಪಲ್ಸರ್ ಬೈಕ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಅನ್ಯ ಧರ್ಮದ ಯುವತಿ ಪ್ರೀತಿಸಿದಕ್ಕೆ ಕೊಲೆ!
ಕೊಲೆಯಾದ ಯುವಕ ಪ್ರೀತಂ ಬನ್ನಿಕಟ್ಟಿ, ಅನ್ಯಧರ್ಮದ ಯುವತಿಯಾದ ಜೇವರ್ಗಿ ಕಾಲೋನಿ ನಿವಾಸಿ ಶಿವಪುತ್ರಪ್ಪ ಡೆಂಕಿ ಅವರ ಮೊಮ್ಮಗಳನ್ನು ಪ್ರೀತಿಸಿದ್ದನು. ಅಲ್ಲದೆ ಆ ಯುವತಿಯನ್ನು ಮನೆಯಿಂದ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದನು. ಇದನ್ನೂ ಓದಿ: ಬುಲ್ಡೋಜರ್ ಗುದ್ದೇಟಿಗೆ ಸೈಕಲ್ ಅಪ್ಪಚ್ಚಿ: ಉತ್ತರ ಪ್ರದೇಶದಲ್ಲಿ ಮೋದಿ-ಯೋಗಿ ಜೋಡಿ ಸೂಜಿದಾರ ತಂತ್ರ ಸಕ್ಸಸ್

ಮದುವೆಯಾದ ನಂತರ ಪ್ರೀತಂ ಮತ್ತು ಸುಶ್ಮೀತಾ ಬೆಂಗಳೂರನಲ್ಲಿ ವಾಸವಾಗಿದ್ದರು. ಕೆಲದಿನಗಳ ಹಿಂದಷ್ಟೇ ಕಲಬುರಗಿಗೆ ಆಗಮಿಸಿದ್ದರು. ಇವರನ್ನು ನೋಡಿ ಆಕ್ರೋಶಗೊಂಡ ಸುಶ್ಮಿತಾಳ ಚಿಕ್ಕಪ್ಪ, ಪ್ರೀತಂನನ್ನು ಮನೆ ಸಮೀಪವೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.

 

Comments

Leave a Reply

Your email address will not be published. Required fields are marked *