ಆಂಧ್ರಪ್ರದೇಶ | ಕಾರಿನಲ್ಲೇ ಉಸಿರುಗಟ್ಟಿ ನಾಲ್ವರು ಮಕ್ಕಳು ಸಾವು

ಅಮರಾವತಿ: ಕಾರಿನಲ್ಲೇ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ(Andhra Pradesh) ವಿಜಯನಗರಂ ಜಿಲ್ಲೆಯ ದ್ವಾರಪುಡಿ(Dwarapudi) ಗ್ರಾಮದಲ್ಲಿ ನಡೆದಿದೆ.

ದ್ವಾರಪುಡಿ ಗ್ರಾಮದ ಮಂಗಿ ಉದಯ್ (8), ಬುರ್ಲೆ ಚಾರುಮತಿ (8), ಬುರ್ಲೆ ಚರಿಷ್ಮಾ (6) ಮತ್ತು ಕಂಡಿ ಮನಸ್ವಿನಿ (6) ಮೃತ ಮಕ್ಕಳು. ಇದನ್ನೂ ಓದಿ: ಪಾಕಿನ F-16 ಯುದ್ಧ ವಿಮಾನವನ್ನು ಭಾರತ ಹೊಡೆದು ಹಾಕಿದ್ಯಾ?

ಭಾನುವಾರ ದ್ವಾರಪುಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕಾರು ನಿಲ್ಲಿಸಿ, ಲಾಕ್ ಮಾಡುವುದನ್ನೇ ಮರೆತು ಹೋಗಿದ್ದ. ಅಲ್ಲೇ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಮಳೆಯಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲೇ ನಿಲ್ಲಿಸಿದ್ದ ಕಾರನ್ನು ಹತ್ತಿದ್ದಾರೆ. ದುರಾದೃಷ್ಟವಶಾತ್, ಕಾರಿನ ಬಾಗಿಲು ಆಕಸ್ಮಿಕವಾಗಿ ಲಾಕ್ ಆಗಿ, ನಾಲ್ವರು ಮಕ್ಕಳು ಕಾರಿನಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ | ಸೋಲಾಪುರದ ಟೆಕ್ಸ್‌ಟೈಲ್‌ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ – 8 ಮಂದಿ ಬಲಿ

ಮಕ್ಕಳಿಗಾಗಿ ಮನೆಯವರು ಸುಮಾರು 3 ಗಂಟೆಗಳ ಕಾಲ ಹುಡುಕಾಟ ನಡೆಸಿದ್ದರು. ಕೊನೆಗೆ ಅಲ್ಲೇ ನಿಲ್ಲಿಸಿದ್ದ ಕಾರನ್ನು ಗಮನಿಸಿದಾಗ ಮಕ್ಕಳು ಕಾರಿನೊಳಗೆ ಸಿಲುಕಿರುವುದು ಪತ್ತೆಯಾಗಿದೆ. ತಕ್ಷಣವೇ ಕಾರಿನ ಗ್ಲಾಸ್ ಒಡೆದು ಮನೆಯವರು ಮಕ್ಕಳನ್ನು ಹೊರೆತೆಗೆದರು. ಅಷ್ಟರಲ್ಲಾಗಲೇ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಇದನ್ನೂ ಓದಿ: ‌’ದಿ ಗರ್ಲ್‌ಫ್ರೆಂಡ್’ ಸಿನಿಮಾ ಏನಾಯ್ತು?- ಕೊನೆಗೂ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ರು ರಶ್ಮಿಕಾ

ಕಾರು ಲಾಕ್ ಮಾಡದೇ ತೆರಳಿದರೆ ಎಂಥಹ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಪ್ರತ್ಯಕ್ಷ ಉದಾಹರಣೆಯಾಗಿದೆ. ಇದೀಗ ಯಾರದೋ ನಿರ್ಲಕ್ಷ್ಯಕ್ಕೆ ಅಮಾಯಕ ಮಕ್ಕಳು ಬಲಿಯಾಗಿದ್ದಾರೆ.