4 ಸಾವಿರ ಮಂದಿಗೆ ಉದ್ಯೋಗ – ಮಂಗಳೂರಿನಲ್ಲಿ ಟೆಕ್‌ ಪಾರ್ಕ್ ತೆರೆಯಲಿದೆ ಟಿಸಿಎಸ್‌

ಬೆಂಗಳೂರು: ದೇಶದ ಅತಿ ದೊಡ್ಡ ಸಾಫ್ಟ್‌ವೇರ್‌ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌(ಟಿಸಿಎಸ್‌) ಮಂಗಳೂರು ಸಮೀಪದ ಕಾರ್ನಾಡ್‌ ಎಂಬಲ್ಲಿ ದೊಡ್ಡ ಕಚೇರಿಯನ್ನು ತೆರೆಯಲಿದೆ.

ಈ ವರ್ಷದ ಮಾರ್ಚ್ ನಿಂದ ಕರ್ನಾಟಕದಲ್ಲಿ ಹೂಡಿಕೆ ಸಂಬಂಧ 27,107.39 ಕೋಟಿ ರೂಪಾಯಿ ಮೌಲ್ಯದ ಬಂಡವಾಳ ಹರಿದು ಬಂದಿದ್ದು, ಈ ಯೋಜನೆಗಳಿಂದ ರಾಜ್ಯದಲ್ಲಿ 46 ಸಾವಿರ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಯಿದೆ.

6,136.97 ಕೋಟಿಯ 85 ಯೋಜನೆಗಳಿಂದ 31,648 ಉದ್ಯೋಗ, ಒಟ್ಟು 18,989.02 ಕೋಟಿಯ 16 ಯೋಜನೆಗಳಿಂದ 10 ಸಾವಿರ ಉದ್ಯೋಗ ಸೃಷ್ಟಿಯಾಗಬಹುದು ಎಂದು ಅಂದಾಜಿಸಲಾಗಿದೆ.

ಬಳ್ಳಾರಿಯಲ್ಲಿ ಜೆಎಸ್ ಡಬ್ಲ್ಯು ವಿಜಯನಗರ್ ಮೆಟಾಲಿಕ್ಸ್ ಲಿಮಿಟೆಡ್ 13,026 ಕೋಟಿ ಹೂಡಿಕೆ, ಸೀಮನ್ಸ್ ಹೆಲ್ತ್ ಕೇರ್ ನಿಂದ ಬೆಂಗಳೂರಿನಲ್ಲಿ 1,085.30 ಕೋಟಿ ವೆಚ್ಚದಲ್ಲಿ ರೀಸರ್ಚ್ ಅಂಡ್ ಎಕ್ಸ್ ಪೆರಿಮೆಂಟಲ್ ಡೆವಲಪ್ ಮೆಂಟ್ ಸರ್ವೀಸಸ್ ಸೆಂಟರ್, ಟಿಸಿಎಸ್ ನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 495 ಕೋಟಿ ರುಪಾಯಿ ಹೂಡಿಕೆ ಸೇರಿದಂತೆ ಹಲವು ಯೋಜನೆಗಳು ಮಂಜೂರಾಗಿವೆ.

ಸ್ಯಾಪ್ ಲ್ಯಾಬ್ಸ್ ಇಂಡಿಯಾ ಪ್ರೈ. ಬೆಂಗಳೂರಿನ ಹೊರವಲಯದಲ್ಲಿರುವ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ (ಐಟಿ ಸೆಕ್ಟರ್) ನಲ್ಲಿ 499 ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದೆ. 5 ವರ್ಷಗಳಲ್ಲಿ ಹಂತಹಂತವಾಗಿ ಯೋಜನೆಯ ವೆಚ್ಚವನ್ನು 490 ಕೋಟಿಯಿಂದ 1 ಸಾವಿರ ಕೋಟಿ ರೂ.ಗೆ ಏರಿಸಲಿದೆ ಎಂದು ಕಂಪನಿ ತಿಳಿಸಿದೆ.

ಟಿಸಿಎಸ್‌ ದಕ್ಷಿಣ ಕನ್ನಡದಲ್ಲಿ 38 ಎಕ್ರೆ ಜಾಗದಲ್ಲಿ ತನ್ನ ಕ್ಯಾಂಪಸ್‌ ತೆರೆಯಲಿದೆ. ಸಂಪೂರ್ಣವಾಗಿ ಕ್ಯಾಂಪಸ್‌ ಆರಂಭಗೊಂಡರೆ ಒಟ್ಟು 4 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ.

Comments

Leave a Reply

Your email address will not be published. Required fields are marked *