ಸುಡಾನ್‌ನಲ್ಲಿ ಚಿನ್ನದ ಗಣಿ ಕುಸಿತ – 38 ಮಂದಿ ದುರ್ಮರಣ

ಸುಡಾನ್: ಪಶ್ಚಿಮ ಕೊರ್ಡೋಫಾನ್‌ ಪ್ರಾಂತ್ಯದಲ್ಲಿ ಚಿನ್ನದ ಗಣಿ ಕುಸಿದು 38 ಮಂದಿ ಧಾರುಣ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ ಸುಡಾನ್‌ ಅಧಿಕಾರಿಗಳು ತಿಳಿಸಿದ್ದಾರೆ.

ಗಣಿಗಾರಿಕಾ ಕಂಪನಿ ಈ ಕುರಿತು ಪ್ರತಿಕ್ರಿಯಿಸಿ, ಫುಜಾ ಗ್ರಾಮದ ಚಿನ್ನದ ಗಣ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದೆ. ಆದರೆ ದುರ್ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಮನಮೋಹನ್ ಸಿಂಗ್ ಪಿಎಂ ಆಗಿದ್ದಾಗ ಈಗಿನಂತೆ ಗಡಿ ಸಮಸ್ಯೆ ಇದ್ದಿದ್ರೆ ರಾಜೀನಾಮೆ ಕೊಡ್ತಿದ್ರು: ಮೋದಿ ವಿರುದ್ಧ ರಾಗಾ ವಾಗ್ದಾಳಿ

ಕಂಪನಿ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ, ಅವಶೇಷಗಳಡಿ ಸಿಲುಕಿರುವ ಮೃತದೇಹಗಳ ತೆರವು ಹಾಗೂ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯಾಚರಣೆ ನಡೆಸುತ್ತಿರುವ ದೃಶ್ಯವನ್ನು ಕಾಣಬಹುದು. ಅಲ್ಲದೇ ಮತ್ತೊಂದು ಚಿತ್ರದಲ್ಲಿ, ಸತ್ತವರನ್ನು ಹೂಳಲು ಜನರು ಸಮಾಧಿಗಳನ್ನು ಸಿದ್ಧಪಡಿಸುತ್ತಿರುವ ದೃಶ್ಯದ್ದಾಗಿದೆ.

ಈ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ಗಣಿಗಾರಿಕೆಯನ್ನು ಮುಚ್ಚಲು ಕೊರ್ಡೋಫಾನ್‌ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ ಸರ್ಕಾರದ ನಿರ್ಧಾರವನ್ನೂ ಕಡೆಗಣಿಸಿ ಗಣಿಗಾರರು ಇಲ್ಲಿ ಗಣಿಗಾರಿಕೆ ಮಾಡುತ್ತಿದ್ದರು. ಇದನ್ನೂ ಓದಿ: ಸಂಸತ್ತಿನಲ್ಲೇ ಪರಸ್ಪರ ಹೊಡೆದಾಡಿಕೊಂಡ ಸಂಸದರು

Comments

Leave a Reply

Your email address will not be published. Required fields are marked *