ಸುಡಾನ್‌ನಲ್ಲಿ ಸಂಘರ್ಷ – ಜೆಡ್ಡಾದಿಂದ 362 ಭಾರತೀಯರು ಬೆಂಗಳೂರು ಕಡೆ ಪ್ರಯಾಣ

ರಿಯಾದ್: ಸೇನಾಪಡೆ ಮತ್ತು ಅರೆಸೇನಾಪಡೆ ನಡುವಿನ ಸಂಘರ್ಷದಿಂದ ನಲುಗಿರುವ ಸುಡಾನ್‌ನಲ್ಲಿ (Sudan) ಸಂಕಷ್ಟಕ್ಕೆ ಸಲುಕಿರುವ ಭಾರತೀಯರನ್ನು ಕರೆತರಲು ‘ಆಪರೇಷನ್‌ ಕಾವೇರಿ’ (Operation Kaveri) ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸುಡಾನ್‌ನಿಂದ ಸೌದಿ ಅರೇಬಿಯಾದ ಜೆಡ್ಡಾಗೆ ಸ್ಥಳಾಂತರಿಸಲಾಗಿದ್ದ 362 ಮಂದಿ ಭಾರತೀಯರ ಬ್ಯಾಚ್‌ವೊಂದು ಬೆಂಗಳೂರು ಕಡೆ ಪ್ರಯಾಣ ಬೆಳೆಸಿದೆ.

ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕಳುಹಿಸುವ ಜವಾಬ್ದಾರಿಯನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ವಹಿಸಿದ್ದಾರೆ. “ಜೆಡ್ಡಾದಿಂದ ಬೆಂಗಳೂರಿಗೆ ಹೊರಟಿರುವ ವಿಮಾನದಲ್ಲಿ ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ 362 ಭಾರತೀಯರನ್ನು ನೋಡಲು ಸಂತೋಷವಾಗಿದೆ. ಇವರಲ್ಲಿ ಹೆಚ್ಚಿನ ಸಂಖ್ಯೆಯವರು ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರು” ಎಂದು ಮುರಳೀಧರನ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಟ್ರಂಪ್ ನನ್ನ ರೇಪ್ ಮಾಡಿದ್ದರು: ಅಮೆರಿಕನ್ ಬರಹಗಾರ್ತಿ ಆರೋಪ

ಸುಡಾನ್‌ನ ಸೇನಾಪಡೆ ಮತ್ತು ಅರೆಸೇನಾ ಪಡೆಯ ನಡುವಿನ ಹಿಂಸಾಚಾರದ ನಡುವೆ ಕರ್ನಾಟಕದ ಸುಮಾರು 31 ಬುಡಕಟ್ಟು ಜನಾಂಗದವರು (ಹಕ್ಕಿಪಿಕ್ಕಿ) ಆಫ್ರಿಕನ್ ದೇಶದಲ್ಲಿ ಸಿಲುಕಿಕೊಂಡಿದ್ದಾರೆ. 392 ಭಾರತೀಯ ಪ್ರಜೆಗಳನ್ನು ಸುಡಾನ್‌ನಿಂದ ಸ್ಥಳಾಂತರಿಸಿದ ನಂತರ ವಿಮಾನದಲ್ಲಿ ಜೆಡ್ಡಾದಿಂದ ದೆಹಲಿಗೆ ಹಿಂತಿರುಗುತ್ತಿದ್ದಾರೆ.

135 ಭಾರತೀಯ ಪ್ರಜೆಗಳ ಒಂಭತ್ತನೇ ಬ್ಯಾಚನ್ನು ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಸ್ಥಳಾಂತರಿಸಲಾಯಿತು. ಸುಡಾನ್‌ನಿಂದ 326 ಭಾರತೀಯರ ಹತ್ತನೇ ಬ್ಯಾಚ್ ಜೆಡ್ಡಾವನ್ನು ತಲುಪಿದೆ. ಇದನ್ನೂ ಓದಿ: ಆಪರೇಷನ್ ಕಾವೇರಿ- 135 ಮಂದಿ ಭಾರತೀಯರಿದ್ದ 3ನೇ ತಂಡ ಸೌದಿಗೆ ರೀಚ್