36 ಗಂಟೆ ಊಟ ಮಾಡಲ್ಲ: ಪ್ರಶಾಂತ್ ಸಂಬರಗಿ

ಬಿಗ್ ಬಾಸ್ ಮನೆಯಲ್ಲಿ ಜಗಳ ಮಾಡಿರುವುದು, ಉಪವಾಸ ಮಾಡುವುದು ಎಂದರೆ ಪ್ರಶಾಂತ್ ಸಂಬರಗಿ. ಇದೀಗ ಮನೆಯಲ್ಲಿ ಮತ್ತೊಂದು ಕಿರಿಕ್ ಆಗಿದೆ. ಈ ಬಾರಿಯೂ ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. 36 ಗಂಟೆಗಳ ಕಾಲ ಉಪವಾಸ ಮಾಡುವುದಾಗಿ ಬಿಗ್‍ಬಾಸ್ ಬಳಿ ಪ್ರಶಾಂತ್ ಸಂಬರಗಿ ಹೇಳಿಕೊಂಡಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್‌ಗೆ ಸ್ಟರ್ಧಿಗಳನ್ನು ಆಯ್ಕೆ ಮಾಡಲು, ಬಿಗ್ ಬಾಸ್ ಈ ವಾರ ಚಟುವಟಿಕೆಯೊಂದನ್ನು ನೀಡಿದ್ದರು. ಮನೆಯ ಅಂಗಳದಲ್ಲಿ ನಿಂತಿರುವ ರೈಲು ಗಾಡಿಯಲ್ಲಿರುವ ಮೂರು ಬೋಗಿಗಳಲ್ಲಿ, ಮೊದಲ ಬೋಗಿಯಲ್ಲಿ ಮೂವರಿಗೆ ಕೂರಲು ಅವಕಾಶ ಇದೆ. ಎರಡನೇ ಬೋಗಿಯಲ್ಲಿ 7 ಜನ ಮತ್ತು ಕೊನೆಯ ಬೋಗಿಯಲ್ಲಿ ಇಬ್ಬರು ಇರಲಿದ್ದಾರೆ. ಬಿಗ್ ಬಾಸ್ ನೀಡುವ ಟಾಸ್ಕ್‌ಗಳನ್ನು ಆಡುವ ಮೂಲಕ ಬೋಗಿಯಲ್ಲಿರುವ ಸದಸ್ಯರ ಸ್ಥಾನಗಳು ಅದಲು ಬದಲು ಆಗುತ್ತವೆ. ಮೂರು ದಿನ ನಡೆದ ಟಾಸ್ಕ್ ನಡೆಸಲಾಗಿದೆ. ಮೊದಲ ಬೋಗಿಯಲ್ಲಿ ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ್ ಮತ್ತು ಅರವಿಂದ್ ಉಳಿದುಕೊಂಡರು. ಆ ಮೂಲಕ ಅವರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾದರು. ಆದರೆ, ಇದರಿಂದ ಪ್ರಶಾಂತ್ ಸಂಬರಗಿ ಬೇಸರ ಮಾಡಿಕೊಂಡಿದ್ದಾರೆ. ಕೊನೇ ಕ್ಷಣದಲ್ಲಿ ನಾನು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುವುದನ್ನು ತಪ್ಪಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಜೊತೆಯಲ್ಲಿ ಉಗ್ರ  ಹೋರಾಟ ಮಾಡುವುದಕ್ಕೆ ಸಿದ್ಧರಾಗಿದ್ದಾರೆ.

ಕ್ಯಾಪ್ಟನ್ಸಿ ಆಯ್ಕೆಯ ಟಾಸ್ಕ್‌ನಲ್ಲಿ ನನ್ನನ್ನು ವಿಜೇತನೆಂದು ನಿರ್ಧಾರ ಮಾಡಿ, ಅನೇಕ ಬಾರಿ ಚರ್ಚೆ ಮಾಡಿ, ಮತ್ತೆ ನಾನು ಸೋತಿದಿನಿ ಅಂತ ಹೇಳಿದ್ರು. ಒಂದು ಷಡ್ಯಂತ್ರದ ರೂಪದಲ್ಲಿ ನನ್ನನ್ನು ಎರಡನೇ ಸ್ಥಾನಕ್ಕೆ ನಿಲ್ಲಿಸಿ, ನನ್ನ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡುವ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಇದರ ವಿರುದ್ಧವಾಗಿ ಹಾಗೂ ನನ್ನ ಮಾತಿಗೆ ಬೆಲೆ ಇಲ್ಲದೇ ಇರುವುದು ಕಂಡುಬರುತ್ತಿದೆ. ಇದನ್ನು ನಾನು ಪ್ರತಿಭಟಿಸುವ ಸಲುವಾಗಿ 36 ಗಂಟೆಗಳ ಕಾಲ ಯಾವುದೇ ಆಹಾರ ಸೇವಿಸುವುದಿಲ್ಲ. ಉಪವಾಸ ಇರುತ್ತೇನೆ. ಈ ಗುಂಪುಗಾರಿಕೆ, ನನ್ನನ್ನು ಕ್ಯಾಪ್ಟನ್ಸಿಗೆ ಆಡಬಾರದು ಎಂದು ಹುನ್ನಾರ ಮಾಡಿದ್ದಾರಲ್ಲ, ಅದರ ವಿರುದ್ಧ ಪ್ರತಿಭಟನೆ ಮಾಡುತ್ತೇನೆ. ಈಗಿನಿಂದ ನನ್ನ ಉಪವಾಸ ಸತ್ಯಾಗ್ರಹ ಆರಂಭವಾಗಿದೆ ಎಂದು ಪ್ರಶಾಂತ್ ಕ್ಯಾಮೆರಾ ಮುಂದೆ ಹೇಳಿದ್ದಾರೆ.


ಆತ ಸ್ಪೋರ್ಟ್ಸ್ ಮ್ಯಾನ್ ಅಂತ ಬೇರೆ ಹೇಳಿಕೊಳ್ಳೋತ್ತಾನೆ. ಕ್ರೀಡಾ ಸ್ಪೂರ್ತಿನೇ ಇರಲಿಲ್ಲ. ಮತ್ತೆ ಮೂರು ಜನ ಆಡೋಣ ಬಾ ಅಂತ ಕರೆದೆ ಬರಲಿಲ್ಲ. ಚಕ್ರವರ್ತಿ ನಾನು 36 ಗಂಟೆಗಳ ಕಾಲ ಉಪವಾಸ ಈಗ ಪ್ರಾರಂಭ ಮಾಡಿದ್ದೇನೆ. 36 ಅಲ್ಲ, 48 ಗಂಟೆಗಳವರೆಗೂ ಹೋಗ್ತಿನಿ. ಬಿಗ್ ಬಾಸ್ ಊಟ ಮಾಡಿ ಅನ್ನೋವರೆಗೂ ಹೋಗ್ತಿನಿ. ಇಷ್ಟೊಂದು ಅನ್ಯಾಯವೇ? ಇಷ್ಟೊಂದು ಷಡ್ಯಂತ್ರವೇ? ಒಬ್ಬ ವ್ಯಕ್ತಿ ಮೇಲೆ ಇಷ್ಟೊಂದು ದ್ವೇಷವೇ? ಎಂದು ಪ್ರಶಾಂತ್ ತನ್ನ ಬೇಸರವನ್ನು ಚಕ್ರವರ್ತಿ ಮುಂದೆ ಹೇಳಿಕೊಂಡಿದ್ದಾರೆ. ಪ್ರಶಾಂತ್ ಮಾತು ಕೇಳಿ ಚಕ್ರವರ್ತಿ ಏನು ಮಾತನಾಡದೆ ಸುಮ್ಮನೆ ಕುಳಿತಿದ್ದಾರೆ.

Comments

Leave a Reply

Your email address will not be published. Required fields are marked *