35 ಗೂಳಿಗಳಿಗೆ ವಿಷವಿಟ್ಟು ಕೊಂದ ಕಟುಕರು – ಜಮೀನಿನಲ್ಲೇ ಮೂಕ ಜೀವಿಗಳ ಮಾರಣಹೋಮ

ಬಳ್ಳಾರಿ: ಹೂವಿನಹಡಗಲಿ ತಾಲೂಕಿನಲ್ಲಿ 35 ಗೂಳಿಗಳ ಮಾರಣಹೋಮ ಮಾಡಲಾಗಿದೆ. ಮೆಕ್ಕೆಜೋಳದ ಬೆಳೆಗೆ ಔಷಧ ಸಿಂಪಡಿಸುವ ನೆಪದಲ್ಲಿ ಬೆಳೆಗಳ ಮೇಲೆ ವಿಷ ಹಾಕಿ 35 ಗೂಳಿಗಳನ್ನು ಕೊಲ್ಲಲಾಗಿದೆ.

ಹಿರೇಹಡಗಲಿ ಬಳಿಯ ಕಟ್ಟಿ ಮಸಾರಿ ಬಳಿಯ ಜಮೀನುಗಳಲ್ಲಿ 28 ಗೂಳಿ ಮತ್ತು ಹಿರೇ ಮಲ್ಲನಕೇರಿ ಬಳಿ 7 ಗೂಳಿ ಸೇರಿದಂತೆ ಒಟ್ಟು 35 ಗೂಳಿಗಳಿಗೆ ಪ್ರೀಡಾನ್ ಅನ್ನೋ ವಿಷ ಹಾಕಿ ಕೊಲ್ಲಲಾಗಿದೆ. ದೇವರಿಗೆ ಬಿಟ್ಟ ಈ ಹಿಂದೆ ಗೂಳಿಗಳನ್ನು ಹಿಡಿದು ಬೇರೆಡೆ ಸಾಗಿಸಲು ತಾಲೂಕು ಆಡಳಿತ  ಪ್ರಯತ್ನ  ಮಾಡಿದ್ರೂ ಗೂಳಿಗಳನ್ನು ಸೆರೆ ಹಿಡಿಯಲು ಆಗಿರಲಿಲ್ಲ. ಹೀಗಾಗಿ ಗೂಳಿಗಳಿಗೆ ಈಗ  ವಿಷವಿಟ್ಟು ಕೊಲ್ಲಲಾಗಿದೆ.

 

ಗೂಳಿಗಳ ಸಾವಿನ ಸುದ್ದಿ ಗೊತ್ತಾಗುತ್ತಿದ್ದಂತೆ ರೈತರು ನೂರಾರು ಸಂಖ್ಯೆಯಲ್ಲಿ ಗೂಳಿಗಳನ್ನು ನೋಡಲು ಆಗಮಿಸುತ್ತಿದ್ದಾರೆ. ಸಾಮೂಹಿಕವಾಗಿ ಕೊಲೆಯಾಗಿರುವ ಗೂಳಿಗಳ ದೃಶ್ಯ ಮನಕಲಕುವಂತಿದೆ. ಗೂಳಿಗಳಿಗೆ ವಿಷವಿಟ್ಟು ಕೊಂದ ಕಟುಕರನ್ನು ಹಿಡಿದು ಶಿಕ್ಷೆ ವಿಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

 

 

Comments

Leave a Reply

Your email address will not be published. Required fields are marked *