ಭಾರತದಲ್ಲಿ ಒಂದು ವರ್ಷದಲ್ಲಿ 320 ದಶಲಕ್ಷ ಟನ್ ಹಣ್ಣು ಉತ್ಪಾದನೆ

ಮಂಡ್ಯ: ನಮ್ಮ ದೇಶ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಸಾಧನೆ ಮಾಡಿದ್ದು, ಒಂದು ವರ್ಷದಲ್ಲಿ ಸುಮಾರು 320 ದಶಲಕ್ಷ ಟನ್ ಹಣ್ಣು ಉತ್ಪಾದಿಸಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದ್ದಾರೆ.  

ಮಂಡ್ಯದ ಗಾಂಧಿಭವನದಲ್ಲಿ ಅಖಂಡ ಕರ್ನಾಟಕ ರೈತ ಸಂಘ, ಕೃಷಿ ಸಂಶೋಧನಾ ಕೇಂದ್ರ, ವಿ.ಸಿ.ಫಾರಂ, ಯಲಿಯೂರು ನಮ್ಮ ರೈತ ಕೂಟದ ವತಿಯಿಂದ ಶನಿವಾರ ನಡೆದ ಉಚಿತ ಬಿಳಿರಾಗಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದ ರೈತರು ಅಗತ್ಯದಷ್ಟು ಆಹಾರ ಉತ್ಪಾದನೆ ಮಾಡಿ ಬೇರೆ ದೇಶಗಳಿಗೂ ರಫ್ತು ಮಾಡುತ್ತಿದೆ. 200 ದಶಲಕ್ಷ ಟನ್ ಹಾಲು ಉತ್ಪಾದನೆ ಮಾಡಿದೆ. ಎಲ್ಲ ದೇಶಗಳಿಗೂ ಆಹಾರ ಉತ್ಪಾದನೆಯೇ ಪ್ರಮುಖ ಆದ್ಯತೆಯಾಗಿದೆ. ಆಹಾರ ಭದ್ರತೆ ಸಾಧಿಸಬೇಕು ಎಂಬುದು ವಿಜ್ಞಾನಿಗಳು ಬಹಳ ಹಿಂದೆಯೇ ತಿಳಿಸಿದ್ದರು. ಹೊಸ ತಳಿಗಳ ಸಂಶೋಧನೆಯಿಂದ 2020-21ನೇ ಸಾಲಿನಲ್ಲಿ 303 ದಶಲಕ್ಷ ಟನ್ ಆಹಾರ ಉತ್ಪಾದನೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಸೋಶಿಯಲ್ ಮೀಡಿಯಾಕ್ಕೆ ಶಿಲ್ಪಾ ಶೆಟ್ಟಿ ಕಮ್ ಬ್ಯಾಕ್-ಟೀಕಾಕಾರರಿಗೆ ಖಡಕ್ ಉತ್ತರ

ಕೃಷಿ ವಿಜ್ಞಾನಿ ಸಂಶೋಧಕ ಡಾ.ಸಿ.ಆರ್.ರವಿಶಂಕರ್ ಮಾತನಾಡಿ, ಬಿಳಿರಾಗಿಯಲ್ಲಿ ಆರೋಗ್ಯ ವೃದ್ಧಿಸುವ ಅಂಶಗಳು ಯೆಥೇಚ್ಛವಾಗಿದೆ ಎಂದು ಹೇಳಿದರು. ಬಿಳಿರಾಗಿಯಲ್ಲಿ ಕಬ್ಬಿಣಾಂಶ ಹೆಚ್ಚಿದೆ. ಕಪ್ಪು ರಾಗಿಗೆ ಇರುವಂಥ ಗುಣಗಳು ಬಿಳಿರಾಗಿಯಲ್ಲಿಯೂ ಇದೆ. ಅಜೀರ್ಣ ಸಮಸ್ಯೆ ಶಮನಗೊಳಿಸುತ್ತದೆ. ಇದನ್ನು ಬಳಸುವುದರಿಂದ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಬಿಳಿರಾಗಿಗೆ ಕೆ/360 ಎಂದು ಹೆಸರನ್ನಿಟ್ಟು 2016 ರಲ್ಲಿ ಬಿಡುಗಡೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಮೊದಲೇ ಕಿಚ್ಚನಿಗೆ ಸರ್ಪ್ರೈಸ್ ನೀಡಿದ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ

ಕಿರುಧಾನ್ಯಗಳಾದ ರಾಗಿ, ಆರ್ಕಾ, ನವಣೆ, ಊದ್ಲು, ಸಾಮೆ, ಕೂರಲು, ಬುರುಗು, ಸಜ್ಜೆ ಸೇರಿದಂತೆ ಎಂಟು ಧಾನ್ಯಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸಬೇಕು. ಜಿಲ್ಲೆಯ ವಿ.ವಿ.ಫಾರಂನ ಕೃಷಿ ಕೇಂದ್ರದಲ್ಲಿ 3,500 ರಾಗಿ ತಳಿಗಳು ಇವೆ ಎಂದು ವಿವರಿಸಿದರು.

Comments

Leave a Reply

Your email address will not be published. Required fields are marked *