ಸಮೀರ್‌ ವಿಡಿಯೋ ವೈರಲ್‌ ಹಿಂದೆ ಭಾರಿ ಫಂಡಿಂಗ್ ಇದೆ; 308 ಟ್ರೋಲ್ ಪೇಜಸ್‌, 50-60 ಕಟೆಂಟ್ ಕ್ರಿಯೇಟರ್ಸ್ ಇದ್ದಾರೆ: ಸುಮಂತ್‌

– ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡೋಕೆ ಮಂಡ್ಯದ ಯುಟ್ಯೂಬರ್‌ಗೆ ಆಫರ್‌
– SIT ವಿಚಾರಣೆಯಲ್ಲಿರುವ ಅಭಿ ಸ್ನೇಹಿತನಿಂದ ಸ್ಫೋಟಕ ಮಾಹಿತಿ

ಬೆಂಗಳೂರು/ಮಂಡ್ಯ: ಸಮೀರ್‌ (Sameer MD) ವಿಡಿಯೋ ಸುಮ್ನೆ ವೈರಲ್‌ ಆಗಿಲ್ಲ. ಇದರ ಹಿಂದೆ 300-400 ಪೇಜ್, 50-60 ಕಟೆಂಟ್ ಕ್ರಿಯೇಟರ್ಸ್ ಕೆಲಸ ಮಾಡಿದ್ದಾರೆ ಅಂತ ಅಭಿ ನನಗೆ ಹೇಳಿದ್ದ ಎಂದು ಯೂಟ್ಯೂಬರ್‌ ಅಭಿಷೇಕ್‌ (Youyuber Abhishek M) ಸ್ನೇಹಿತ ಸುಮಂತ್‌ ಸ್ಫೋಟಕ ಮಾಹಿತಿ ನೀಡಿದ್ದಾರೆ.

 

 

ಯೂಟ್ಯೂಬರ್ಸ್‌ಗಳಿಗೆ ಆಫರ್‌ ನೀಡಿದ ಸಂಬಂಧ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿದ ಸುಮಂತ್‌, ಸ್ಫೋಟಕ ಮಾಹಿತಿ ನೀಡಿದ್ದಾರೆ. ಧರ್ಮಸ್ಥಳ ವಿರುದ್ಧ ವಿಡಿಯೋ ಮಾಡೋದಕ್ಕೆ ದುಡ್ಡು ಕೊಡ್ತೀವಿ ಅಂತ ಆಫರ್‌ ಬಂದಿತ್ತು. ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದ ಅಭಿಷೇಕ್‌ನಿಂದಲೂ ಆಫರ್‌ ಬಂದಿತ್ತು ಅಂತ ಹೇಳಿದ್ದಾರೆ. ಇದನ್ನೂ ಓದಿ: ಯೂಟ್ಯೂಬರ್‌ ಸಮೀರ್‌ ಮನೆ ಮೇಲೆ ಪೊಲೀಸರ ದಾಳಿ, ಪರಿಶೀಲನೆ

ಧರ್ಮಸ್ಥಳದ (Dharmasthala) ವಿರುದ್ಧ ವಿಡಿಯೋ ಮಾಡಲು ಅಭಿ ನಂಗೆ 5-6 ತಿಂಗಳ ಹಿಂದೆ ಆಫರ್ ಕೊಟ್ಟಿದ್ದ. ನಾನು ವಿಡಿಯೋ ಮಾಡ್ತಾ ಇದ್ದೀನಿ ದುಡ್ಡು ಬರುತ್ತೆ, ಫೈನಾನ್ಶಿಯಲ್ ಸಪೋರ್ಟ್ ಕೂಡ ಇದೆ. ಜೊತೆಗೆ ಟ್ರಾನ್ಸ್‌ಪೋರ್ಟ್‌, ಉಳಿದುಕೊಳ್ಳುವ ವ್ಯವಸ್ಥೆ ಎಲ್ಲವನ್ನೂ ಮಾಡ್ತಾರೆ ಅಂತಾ ಹೇಳಿದ್ದ. ಆದ್ರೆ ನಾನು ಅದಕ್ಕೆ ಒಪ್ಪಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯೂಟ್ಯೂಬರ್‌ ಅಭಿಷೇಕ್‌ಗೆ SIT ಫುಲ್‌ ಗ್ರಿಲ್‌ – ಲೈಕ್ಸ್, ವ್ಯೂವ್ಸ್‌ಗಾಗಿ ವಿಡಿಯೋ ಮಾಡಿದೆ ಅಂತ ತಪ್ಪೊಪ್ಪಿಗೆ

ಮುಂದುವರಿದು.. ಸಮೀರ್ ವಿಡಿಯೋ ವೈರಲ್ (Video Viral) ಹಿಂದೆ ಸಾಕಷ್ಟು ಫಂಡಿಂಗ್ ಇದೆ ಅಂತಾನೂ ಅಭಿ ನಂಗೆ ಹೇಳಿದ್ದ. ಅಭಿ ಭೇಟಿ ವೇಳೆ ನಾನು ಸಮೀರ್ ವಿಡಿಯೋ ವೈರಲ್ ಬಗ್ಗೆ ಕೇಳಿದ್ದೆ. ಸಮೀರ್ ವಿಡಿಯೋ ಸುಮ್ ಸುಮ್ನೆ ವೈರಲ್ ಆಗಿಲ್ಲ ಅಂತಾ ಅಭಿ ನಂಗೆ ಹೇಳಿದ್ದ. ಅದರ ಹಿಂದೆ 300-400 ಟ್ರೋಲ್ ಪೇಜ್, 50-60 ಕಟೆಂಟ್ ಕ್ರಿಯೇಟರ್ಸ್ ಇದ್ದಾರೆ. ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಡೈರೆಕ್ಟ್ ದುಡ್ಡಿಗೂ ಸಪೋರ್ಟ್ ಮಾಡ್ತಾರೆ. ಪ್ರೀ ಪ್ಲ್ಯಾನ್ಡ್‌ ಇದು ಅಂತಾ ಅಭಿ ನಂಗೆ ಹೇಳಿದ್ದ ಎಂದು ಸುಮಂತ್‌ ರಹಸ್ಯ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ದೊಡ್ಡ ತಿರುವು – ಸೌಜನ್ಯ ಪ್ರಕರಣದಲ್ಲಿ ಕ್ಲೀನ್‌ ಚಿಟ್‌ ಪಡೆದವರಿಗೆ SIT ಬುಲಾವ್‌