ಪಾಕ್‌ ಒಳಗಡೆಯೇ ಏರ್‌ಸ್ಟ್ರೈಕ್‌ – 7 ಬಾಂಬ್‌ಗೆ 30 ಮಂದಿ ಬಲಿ

ಇಸ್ಲಾಮಾಬಾದ್‌: ಖೈಬರ್ ಪಖ್ತುಂಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿ ಪಾಕಿಸ್ತಾನ ವಾಯುಪಡೆ (Pakistan Air Force) ನಡೆಸಿದ ವೈಮಾನಿಕ ದಾಳಿಯಲ್ಲಿ (Air Strike) ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ.

ಕಣಿವೆಯಲ್ಲಿರುವ ಮಾಟ್ರೆ ದಾರಾ ಗ್ರಾಮದ ಮೇಲೆ ಪಾಕಿಸ್ತಾನದ ಜೆ-17 ಯುದ್ಧ ವಿಮಾನಗಳು ಎಂಟು LS-6 ಬಾಂಬ್‌ಗಳನ್ನು ಹಾಕಿವೆ. ಸೋಮವಾರ ನಸುಕಿನ ಜಾವ 2 ಗಂಟೆಯ ವೇಳೆ ಈ ದಾಳಿ ನಡೆದಿದ್ದು ಭಾರೀ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ ಎಂದು ವರದಿಯಾಗಿದೆ.  ಇದನ್ನೂ ಓದಿ:  ಒಂದಿಂಚು ಜಾಗವನ್ನೂ ಬಿಡಲ್ಲ – ಬಾಗ್ರಾಮ್‌ ವಾಯುನೆಲೆ ಹಿಂದಿರುಗಿಸುವ ಟ್ರಂಪ್ ಬೇಡಿಕೆ ತಿರಸ್ಕರಿಸಿದ ತಾಲಿಬಾನ್

 

ರಕ್ಷಣಾ ತಂಡಗಳು ಅವಶೇಷಗಳ ಅಡಿಯಲ್ಲಿ ಶವಗಳನ್ನು ಹುಡುಕುವಲ್ಲಿ ನಿರತವಾಗಿವೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಚೀರಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಖೈಬರ್ ಪಖ್ತುಂಖ್ವಾದಲ್ಲಿ ಹಿಂದೆ ಅನೇಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಪಾಕಿಸ್ತಾನದಲ್ಲಿ ಭಯೋತ್ಪಾದ ದಾಳಿ ಹೆಚ್ಚಾಗುತ್ತಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ.42 ರಷ್ಟು ಹೆಚ್ಚಳ ಕಂಡಿದೆ. ಇದನ್ನೂ ಓದಿ:  ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ

ಈ ವರ್ಷದ ದೇಶಾದ್ಯಂತ ಕನಿಷ್ಠ 74 ಭಯೋತ್ಪಾದಕ ದಾಳಿಗಳು ದಾಖಲಾಗಿದ್ದು, 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಖೈಬರ್ ಪಖ್ತುಂಖ್ವಾದ ಪ್ರಾಂತ್ಯದಲ್ಲಿ ಹೆಚ್ಚು ದಾಳಿ ನಡೆದರೆ ನಂತರದ ಸ್ಥಾನದಲ್ಲಿ ಬಲೂಚಿಸ್ತಾನ್ ಇದೆ.