30ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾದ ಕಂಟೈನ್ಮೆಂಟ್ ಝೋನ್‍ಗೆ ನುಗ್ಗಿ ಕಳ್ಳತನ

– ಸುಮಾರು 1 ಲಕ್ಷ ರೂ.ಚಿನ್ನಾಭರಣ ಕಳ್ಳತನ

ದಾವಣಗೆರೆ: ಕೊರೊನಾ ಭಯವನ್ನೂ ಲೆಕ್ಕಿಸದ ಕಳ್ಳರು ಕಂಟೈನ್ಮೆಂಟ್ ಝೋನ್‍ಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ನಗರದ ಇಮಾಮ್ ನಗರದಲ್ಲಿ ಘಟನೆ ನಡೆದಿದ್ದು, ಕೊರೊನಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಹೀಗಿದ್ದರೂ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು, ಒಂದು ಲಕ್ಷ ರೂಪಾಯಿಗೂ ಅಧಿಕ ಬೆಲೆಯ ಚಿನ್ನ, 56 ಸಾವಿರ ರೂಪಾಯಿ ನಗದು ಕಳ್ಳತನ ಮಾಡಿದ್ದಾರೆ. ಅರುಣ್ ಕುಮಾರ್ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಇದೇ ಏರಿಯಾದಲ್ಲಿ ಸರಣಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಕಂಟೋನ್ಮೆಂಟ್ ಝೋನ್ ಮಾಡಿದ ಹಿನ್ನೆಲೆ 20 ದಿನಗಳ ಹಿಂದೆ ಅರುಣ್ ಕುಮಾರ್ ಕುಟುಂಬ ವಿನೋಬನಗರದ ತಮ್ಮ ಸಂಬಂಧಿಕರ ಮನೆಗೆ ತೆರಳಿತ್ತು. ಇದೇ ಸಮಯವನ್ನು ನೋಡಿಕೊಂಡು ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಕಂಟೋನ್ಮೆಂಟ್ ಝೋನ್ ಬಳಿ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿತ್ತು. ಇಷ್ಟೆಲ್ಲಾ ಭದ್ರತೆ ನಡುವೆಯೂ ಕಳ್ಳತನ ಮಾಡಿದ್ದಾರೆ. ಅಲ್ಲದೆ ಇಮಾಮ್ ನಗರದ ಕಂಟೋನ್ಮೆಂಟ್ ಝೋನ್‍ನಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಭಯದಿಂದಲೇ ಜನ ಕಾಲ ಕಳೆಯುತ್ತಿದ್ದಾರೆ.

ಕಳ್ಳತನದ ಕುರಿತು ಅಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *