Jharkhand Exit Polls: ಜಾರ್ಖಂಡ್‌ನಲ್ಲಿ ಎನ್‌ಡಿಎ v/s ‘ಇಂಡಿಯಾ’ ಕೂಟ – ಜಿದ್ದಾಜಿದ್ದಿನ ಹೋರಾಟದಲ್ಲಿ ಗೆಲ್ಲೋದ್ಯಾರು?

– ಒಂದು ಸಮೀಕ್ಷೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಗೆಲುವು

ರಾಂಚಿ: ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಆದರೆ, ಒಂದು ಸಮೀಕ್ಷೆ ಮಾತ್ರ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರ ಜೆಎಂಎಂ ನೇತೃತ್ವದ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂದು ಹೇಳಿದೆ.

ಮ್ಯಾಟ್ರಿಜ್‌
ಎನ್‌ಡಿಎ 42-47, ಮಹಾಘಟಬಂಧನ್ 25-30

ಪೀಪಲ್ಸ್ ಪಲ್ಸ್‌
ಎನ್‌ಡಿಎ 44-53, ಇಂಡಿಯಾ ಬ್ಲಾಕ್‌ 25-37

ಟೈಮ್ಸ್ ನೌ-ಜೆವಿಸಿ
ಎನ್‌ಡಿಎ 40-44, ಮಹಾಮೈತ್ರಿಕೂಟ 30-40

ಆಕ್ಸಿಸ್ ಮೈ ಇಂಡಿಯಾ
ಜೆಎಂಎಂ+ 53, ಎನ್‌ಡಿಎಗೆ 25

81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 68, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‌ಯು) 10, ಜನತಾ ದಳ (ಯುನೈಟೆಡ್) 2 ಮತ್ತು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 1 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.

2019ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 49, ಬಿಜೆಪಿ 22, ಜೆವಿಎಂ 3 ಹಾಗೂ ಇತರೆ 1 ಸ್ಥಾನ ಗೆದ್ದಿದ್ದವು.