ಬೆಂಗಳೂರು: ಮಗಳ ಮದುವೆಗೆ ಎಂದು ಹೇಳಿ ನಕಲಿ ನೋಟುಗಳನ್ನ ನೀಡಿ 1 ಕೆಜಿಯಷ್ಟು ಚಿನ್ನ ಖರೀದಿ ಮಾಡಿದ್ದ ಮೂವರು ಆರೋಪಿಗಳನ್ನ ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

ವಿನೋದ್, ಹೇಮಂತ್ ಹಾಗೂ ಹರೀಶ್ ಕುಮಾರ್ ಬಂಧಿತ ಆರೋಪಿಗಳು. ಈ ಮೂವರು 32 ಲಕ್ಷ ರೂ. ನಕಲಿ ನೋಟು ನೀಡಿ ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸಿದ್ದರು.
ಆರೋಪಿಯೊಬ್ಬ ತಾನು ಚಿಕ್ಕಮಗಳೂರು ಮೂಲದ ಜುಂಗರಾಜ್ ಎಂದು ಪರಿಚಯ ಮಾಡಿಕೊಂಡಿದ್ದ. ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನದಂಗಡಿ ಇಟ್ಟುಕೊಂಡಿದ್ದ ದಿನೇಶ್ ಕುಮಾರ್ ಅವರೊಂದಿಗೆ ಚಿನ್ನ ಕೊಟ್ಟು ಹಣ ಪಡೆಯುವಂತೆ ಫೋನ್ ಮೂಲಕವೇ ವ್ಯವಹಾರ ನಡೆಸಿದ್ದ.

ಕಾರಿನಲ್ಲಿ ಬಂದು 2 ಸಾವಿರ ರೂ. ಮುಖಬೆಲೆಯ 32 ಲಕ್ಷ ರೂ. ಖೋಟಾ ನೋಟು ನೀಡಿ ಆರೋಪಿಗಳು ಚಿನ್ನದ ಗಟ್ಟಿ ಖರೀದಿಸಿದ್ದಾರೆ. ಅಲ್ಲದೆ ಕೋಟಕ್ ಮಹಿಂದ್ರ ಬ್ಯಾಂಕ್ ಸೀಲನ್ನು ದುರ್ಬಳಕೆ ಮಾಡಿದ್ದಾರೆ.

Leave a Reply