2ನೇ ವರ್ಷದ ಮದ್ವೆ ವಾರ್ಷಿಕೋತ್ಸವ – ಅನುಷ್ಕಾಗೆ ಸಿಕ್ತು ಕೊಹ್ಲಿಯಿಂದ ಸ್ಪೆಷಲ್ ಗಿಫ್ಟ್

ಮುಂಬೈ: ವಿಂಡೀಸ್ ವಿರುದ್ಧ ಸರಣಿ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಗೆ ನೀಡಿದ ಸ್ಪೆಷಲ್ ಗಿಫ್ಟ್ ಬಗ್ಗೆ ಮಾತನಾಡಿದ್ದಾರೆ.

ಬುಧವಾರ ರಾತ್ರಿ ಮೂರನೇ ಟಿ 20 ಪಂದ್ಯವನ್ನು ಗೆದ್ದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು,”ನನ್ನ ಕ್ರಿಕೆಟ್ ಬಾಳ್ವೆಯ ಸ್ಪೆಷಲ್ ಇನ್ನಿಂಗ್ಸ್ ಇದು. ಅಷ್ಟೇ ಅಲ್ಲದೇ ಇಂದು ನಾವು ಎರಡನೇ ಮದುವೆ ವಾರ್ಷಿಕೋತ್ಸವ ಆಚರಿಸುತ್ತಿದ್ದು ಇದು ಸ್ಪೆಷಲ್ ಗಿಫ್ಟ್” ಎಂದು ಆಟವನ್ನು ಬಣ್ಣಿಸಿದರು.

2017ರ ಡಿಸೆಂಬರ್ 11 ರಂದು ಇಟಲಿಯ ಟಸ್ಕನಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಪಂದ್ಯದಲ್ಲಿ ಕೊಹ್ಲಿ ಔಟಾಗದೇ 70 ರನ್(29 ಎಸೆತ, 4 ಬೌಂಡರಿ, 7 ಸಿಕ್ಸರ್) ಸಿಡಿಸಿದ್ದರು. 12.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿದ್ದಾಗ ಕ್ರೀಸ್‍ಗೆ ಆಗಮಿಸಿದ ಕೊಹ್ಲಿ ಆರಂಭದಿಂದಲೇ ಬಿರುಸಿನ ಆಟಕ್ಕೆ ಇಳಿದ ಪರಿಣಾಮ ಭಾರತ 200 ರನ್ ಗಳ ಗಡಿಯನ್ನು ದಾಟಿತ್ತು.

ರಾಹುಲ್ ಮತ್ತು ಕೊಹ್ಲಿ ಮೂರನೇ ವಿಕೆಟಿಗೆ 45 ಎಸೆತಗಳಲ್ಲಿ 95 ರನ್ ಚಚ್ಚಿದ್ದರು. ಇದರಲ್ಲಿ ಕೊಹ್ಲಿ 27 ಎಸೆತಗಳಲ್ಲಿ 64 ರನ್ ಹೊಡೆದರೆ ರಾಹುಲ್ 18 ಎಸೆತಗಳಲ್ಲಿ 27 ರನ್ ಹೊಡೆದಿದ್ದರು.

ಕೊಹ್ಲಿ 21 ಎಸೆತಗಳಲ್ಲಿ ಅರ್ಧಶತಕ ಹೊಡೆದ ಕೊಹ್ಲಿ ನಂತರದ 9 ಎಸೆತಗಳಲ್ಲಿ 20 ರನ್ ಬಾರಿಸಿದ್ದರು. ನಾಯಕ ಪೊಲಾರ್ಡ್ ಎಸೆದ ಇನ್ನಿಂಗ್ಸ್ ನಲ್ಲಿ 19ನೇ ಓವರ್ ನಲ್ಲಿ 27 ರನ್ ಬಂದಿತ್ತು. ಕೊಹ್ಲಿ ಮೂರು ಸಿಕ್ಸ್, ಒಂದು ಬೌಂಡರಿ, ಒಂದು ಒಂಟಿ ರನ್ ಓಡಿದ್ದರು.

ಮೊದಲ ಪಂದ್ಯದಲ್ಲಿ 94 ರನ್( 50 ಎಸೆತ, 6 ಬೌಂಡರಿ, 6 ಸಿಕ್ಸರ್) ಎರಡನೇ ಪಂದ್ಯದಲ್ಲಿ 19 ರನ್(17 ಎಸೆತ, 2 ಬೌಂಡರಿ) ಹೊಡೆದ ಕೊಹ್ಲಿ ಅರ್ಹವಾಗಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Comments

Leave a Reply

Your email address will not be published. Required fields are marked *