ಹಟ್ಟಿ ಪಟ್ಟಣ ಪಂಚಾಯತಿ ಸಿಬ್ಬಂದಿಗೆ 28 ತಿಂಗಳಿಂದ ಸಂಬಳವಿಲ್ಲ

– ಹೋರಾಟಕ್ಕಿಳಿದ ಪೌರಕಾರ್ಮಿಕರು

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಕಳೆದ 28 ತಿಂಗಳಿನಿಂದ ಕಾರ್ಮಿಕರ ಸಂಬಳ ಆಗಿಲ್ಲ. ಹೀಗಾಗಿ ಪೌರಕಾರ್ಮಿಕರು, ಸಿಬ್ಬಂದಿ, ಪಟ್ಟಣ ಪಂಚಾಯತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಸಂಬಳಕ್ಕಾಗಿ ಒತ್ತಾಯಿಸಿದರು.

ಪಟ್ಟಣ ಪಂಚಾಯತಿಯಲ್ಲಿ 27 ಜನ ಖಾಯಂ ಪೌರಕಾರ್ಮಿಕರು, 22 ಜನ ದಿನಗೂಲಿ ನೌಕರರಿದ್ದಾರೆ. ಇದರಲ್ಲಿ 2019ರ ಏಪ್ರಿಲ್ ನಿಂದ 22 ಜನ ದಿನಗೂಲಿ ನೌಕರರ ವೇತನ ಆಗಿಲ್ಲ. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೂ ಸಹ ವೇತನವಾಗಿಲ್ಲ. ಆದರೂ ಎಲ್ಲಾ ಸಿಬ್ಬಂದಿ ಕೋವಿಡ್‍ನಂತಹ ಕಠಿಣ ಸಮಯದಲ್ಲೂ ಸಂಬಳವಿಲ್ಲದೆ ಕೆಲಸ ಮಾಡಿದ್ದಾರೆ.

ಸಂಬಳ ಇಲ್ಲದೆ ಈಗ ಪರಸ್ಥಿತಿ ಮಿತಿಮೀರಿದ್ದರಿಂದ ಎಂಟು ದಿನದಿಂದ ಕೆಲಸ ಮಾಡುತ್ತಿಲ್ಲ. ಸಂಬಳ ನೀಡುವವರೆಗೆ ಕೆಲಸ ಮಾಡುವುದಿಲ್ಲ ಅಂತ ಪೌರಕಾರ್ಮಿಕರು ಪಟ್ಟುಹಿಡಿದಿದ್ದಾರೆ. ಜಿಲ್ಲಾಧಿಕಾರಿಗಳು ಸಂಬಳ ಬಿಡುಗಡೆ ಮಾಡಿಸಬೇಕು ಅಂತ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಾಕಿ ವೇತನ ಪಾವತಿಗೆ ಒತ್ತಾಯ: ಹಟ್ಟಿ ಚಿನ್ನದ ಗಣಿ ಕಾರ್ಮಿಕರಿಂದ ಪ್ರತಿಭಟನೆ

Comments

Leave a Reply

Your email address will not be published. Required fields are marked *