ಉಚಿತವಾಗಿ 120 ದಿನಗಳಲ್ಲಿ 25 ಸಾವಿರ ಮಂದಿಗೆ ಕೋವಿಡ್ ಲಸಿಕೆ- ಶ್ರೀರಾಮ ಸೇವಾ ಮಂಡಳಿ

ಬೆಂಗಳೂರು: ಶ್ರೀರಾಮ ಸೇವಾ ಮಂಡಳಿ ವತಿಯಿಂದ ಉಚಿತವಾಗಿ 120 ದಿನಗಳಲ್ಲಿ 25 ಸಾವಿರ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡಿದ ಸಲುವಾಗಿ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ರಾಜಾಜಿನಗರ ಶ್ರೀರಾಮಮಂದಿರದ ಬಳಿ ಇರುವ ಶ್ರೀರಾಮದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷರಾದ ಕೆ.ಎಸ್.ಶ್ರೀಧರ್, ನಿರ್ದೇಶಕರಾದ ಬಾಬುನರಸಿಂಹ, ಡಾ||ಸಿಂಧೂ, ಡಾ||ಪೂಜಾ ಮತ್ತು ಆರೋಗ್ಯ ನಿರೀಕ್ಷಕರಾದ ಸುಬ್ರಮಣ್ಯ ಪದಕಿರವರು ಮತ್ತು ಶ್ರೀರಾಮ ಸೇವಾ ಮಂಡಳಿ ಪದಾಧಿಕಾರಿಗಳು ಈ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. 25ಸಾವಿರ ಲಸಿಕೆ ಪಡೆದ ಫಲಾನುಭವಿಗಳಿಗೆ ಸನ್ಮಾನಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ನೆಲಮಂಲಗದಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಬ್ರೇಕ್

ಅಧ್ಯಕ್ಷ ಕೆ.ಎಸ್.ಶ್ರೀಧರ್ ಈ ಕುರಿತು ಮಾತನಾಡಿ, ಶ್ರೀರಾಮ ಸೇವಾ ಮಂಡಳಿ ಸಮಾಜಮುಖಿ ಕಾರ್ಯಗಳು ಮತ್ತು ಜನರ ಸೇವೆ ಮಾಡುವಲ್ಲಿ ನಿರತವಾಗಿದೆ. ಕಳೆದ 20 ತಿಂಗಳಿಂದ ಕೊರೊನಾ ಎಂಬ ಮಹಾಮಾರಿ ಜನರ ಜೀವನವನ್ನು ತತ್ತರಗೊಳಿಸಿದೆ. ಆದರೆ ಶ್ರೀರಾಮ ಸೇವಾ ಮಂಡಳಿ ಜನರ ಸಂಕಷ್ಟಕ್ಕೆ ನೆರವು ನೀಡಬೇಕೆಂದು ಕೊವಿಡ್ ಮೊದಲನೆಯ ಮತ್ತು ಎರಡನೇ ಅಲೆಯಲ್ಲಿ 35ಸಾವಿರ ಆಹಾರ ಪ್ಯಾಕೇಟ್ ವಿತರಿಸಲಾಯಿತು ಎಂದು ತಿಳಿಸಿದರು. ಇದನ್ನೂ ಓದಿ: ತನ್ನ ವಿರುದ್ಧ ಟೀಕೆ ಮಾಡುತ್ತಿರೋರಿಗೆ ಸ್ಟ್ರಾಂಗ್ ಉತ್ತರ ಕೊಟ್ಟ ಸಮಂತಾ

ಸಾವಿರಾರು ಆಹಾರ ಕಿಟ್ ಗಳನ್ನು ವಿತರಿಸಲಾಯಿತು. ಕೋವಿಡ್ ನಿಂದ ಉಸಿರಾಟದ ತೊಂದರೆ ಇರುವವರಿಗೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ 11ಆಕ್ಸಿಜನ್ ಸಾಂದ್ರಕಗಳನ್ನು ಉಚಿತವಾಗಿ ನೀಡಲಾಯಿತು. ಬಿಬಿಎಂಪಿ ಮತ್ತು ಶ್ರೀರಾಮ ಸೇವಾ ಮಂಡಳಿ ಸಹಯೋಗದಲ್ಲಿ 25ಸಾವಿರ ಕೋವಿಡ್-19ಲಸಿಕೆಗಳನ್ನು 120ದಿನದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗಿದೆ. ಶ್ರೀರಾಮ ಸೇವಾ ಮಂಡಳಿ ಭಕ್ತರ ಸೇವೆಯ ಜೊತೆಯಲ್ಲಿ ಜನರ ಸೇವೆಗೆ ಸದಾ ಮುಂದೆ ಇರುತ್ತದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *