ನಡುರಸ್ತೆಯಲ್ಲಿ `ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಯುವಕ – ವೆಬ್ ಸೀರಿಸ್ ತಂದಿಟ್ಟ ಸಂಕಷ್ಟ

ಬೆಂಗಳೂರು: ನಡು ರಸ್ತೆಯಲ್ಲಿ ನಿಂತು ಪಾಕಿಸ್ತಾನದ (Pakistan) ಪರ ಘೋಷಣೆ ಕೂಗಿದ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರು (Bengaluru) ನಗರದ ಬಿಟಿಎಂ ಬಡಾವಣೆಯ 2ನೇ ಹಂತದ 7ನೇ ಮುಖ್ಯರಸ್ತೆಯಲ್ಲಿರುವ ಟೀ ಶಾಪ್ ಬಳಿ ಯುವಕನೊಬ್ಬ `ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾನೆ. ಇದರಿಂದ ಅನುಮಾನಗೊಂಡ ಸಾರ್ವಜನಿಕರು ಮೈಕೋ ಲೇಔಟ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಮೈಕೋ ಲೇಔಟ್ ಪೊಲೀಸರು (Mico Layout Police) ಆರೋಪಿ ಯುವಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ನಮಗೇ ಬಹುಮತ, ನಮ್ಮದೇ ಸರ್ಕಾರ; ಕಾಂಗ್ರೆಸ್ ಸಾಮರ್ಥ್ಯ 60-70 ಸೀಟ್‌ಗಳಷ್ಟೇ – ಬಿಎಸ್‌ವೈ ವಿಶ್ವಾಸ

ವಿಚಾರಣೆ ನಡೆಸಿದಾಗ ಈತನ ಮೂಲ ಪತ್ತೆಯಾಗಿದೆ. ಅಂಕುಶ್ (24) ಹೆಸರಿನ ಈತ ಪಶ್ಚಿಮಬಂಗಾಳ ಮೂಲದವನು. ಹೋಟೆಲ್ ಮ್ಯಾನೇಜ್ಮೆಂಟ್ ಮಾಡಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಹೋಟೆಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಬುಧವಾರ ಮಧ್ಯಾಹ್ನ ಘೋಷಣೆ ಕೂಗಿರೋದು ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತಂದೆ-ತಾಯಿ ಪರಸ್ಪರ ಬೇರಾಗಿದ್ದನ್ನು ಹೇಳಿಕೊಳ್ಳೋಕೆ ನನಗೆ 40 ವರ್ಷ ಬೇಕಾಯ್ತು: ಸ್ಮೃತಿ ಇರಾನಿ

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಅಂಕುಶ್ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ. ಅಲ್ಲದೇ ಈತ `ಫರ್ಜಿ’ ವೆಬ್ ಸೀರಿಸ್ ನೋಡಿಕೊಂಡು ಹೋಗುತ್ತಿದ್ದ. ಈ ವೇಳೆ ಅದರಲ್ಲಿ ಪಾಕಿಸ್ತಾನದ ಪ್ರಸ್ತಾಪವಾಗುತ್ತೆ. ಅದನ್ನೇ ಆರೋಪಿ ಅಂಕುಶ್ ಜೋರಾಗಿ ಪುನರುಚ್ಚರಿಸಿದ್ದಾನೆ. ಜನರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು, ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದಿರುವುದಾಗಿ ತಿಳಿಸಿದ್ದಾರೆ.

ನಂತರ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮೈಕೋ ಲೇಔಟ್ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.