22ನೇ ಮಹಡಿಯಿಂದ ಜಿಗಿದ 21 ವರ್ಷದ ಯುವಕ

-ಪೊಲೀಸರಿಂದ ಘಟನಾ ಸ್ಥಳದ ಪರಿಶೀಲನೆ

ನವದೆಹಲಿ: 21 ವರ್ಷದ ಯುವಕ 22ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಘಾಜಿಯಾಬಾದ್ ನಲ್ಲಿ ನಡೆದಿದೆ.

ಘಾಜಿಯಾಬಾದ್ ನಲ್ಲಿ ಇಂದಿರಾಪುರಂನಲ್ಲಿ ಘಟನೆ ನಡೆದಿದೆ. ಯುವಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂದು ತಿಳಿದಿ ಬಂದಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ಯುವಕ ವಿದ್ಯಾರ್ಥಿಯಾಗಿದ್ದು, ಕೊರೊನಾದಿಂದಾಗಿ ಕಾಲೇಜು ಬಂದ್ ಆಗಿದ್ದರಿಂದ ಮನೆಯಲ್ಲಿದ್ದನು.

ಈ ಕುರಿತು ಮಾಹಿತಿ ನೀಡಿರುವ ಎಎಸ್‍ಪಿ ಅಂಶು ಜೈನ್, ಘಟನೆ ನಡೆದ ವೇಳೆ ಯುವಕನ ಕುಟುಂಬಸ್ಥರು ಮನೆಯಲ್ಲಿದ್ದರು. ಯುವಕ ನೆರೆಯ ಕಟ್ಟಡದ ಮೇಲೆ ಹೋಗುತ್ತಿರೋದನ್ನು ಸ್ಥಳೀಯರು ಗಮನಿಸಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ಪೋಷಕರು ಮತ್ತು ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

 

Comments

Leave a Reply

Your email address will not be published. Required fields are marked *