ಯಶ್ ಹುಟ್ಟುಹಬ್ಬಕ್ಕೆ ರಾರಾಜಿಸಲಿದೆ 216 ಅಡಿ ಎತ್ತರದ ಕಟೌಟ್

– 5,000 ಕೆಜಿ ಕೇಕ್ ಮೂಲಕ ಯಶ್ ಹೆಸ್ರಲ್ಲಿ ದಾಖಲೆ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಎರಡು ದಿನಗಳಿದ್ದು, ಈಗಾಗಲೇ ಅಭಿಮಾನಿಗಳು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಜನವರಿ 8ರಂದು ಯಶ್ ಅವರ ಹುಟ್ಟುಹಬ್ಬಕ್ಕೆ ನಂದಿ ಲಿಂಕ್ ಗ್ರೌಂಡ್ ನಲ್ಲಿ ಅದ್ಧೂರಿ ವೇದಿಕೆ ಸಜ್ಜಾಗುತ್ತಿದೆ. ಅಲ್ಲದೆ ಹುಟ್ಟಹಬ್ಬದಂದು ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ ಹೊಸ ದಾಖಲೆಯನ್ನು ಸೃಷ್ಟಿ ಮಾಡಲು ಅಭಿಮಾನಿಗಳು ತಯಾರಿ ನಡೆಸುತ್ತಿದ್ದಾರೆ. ರಾಕಿ ಭಾಯ್ ಹುಟ್ಟುಹಬ್ಬಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಅಭಿಮಾನಿ ಬಳಗ ಬರಲಿದೆ. ಹಾಗಾಗಿ 216 ಅಡಿ ಎತ್ತರದಲ್ಲಿ ರಾಕಿಂಗ್ ಸ್ಟಾರ್ ಕಟೌಟ್ ರಾರಾಜಿಸಲಿದೆ. ಅಲ್ಲದೆ 5 ಸಾವಿರ ಕೆ.ಜಿ ಕೇಕ್ ಮೂಲಕ ಯಶ್ ಹೆಸರಿನಲ್ಲಿ ಅಭಿಮಾನಿಗಳು ದಾಖಲೆ ಮಾಡಲು ಸಜ್ಜಾಗಿದ್ದಾರೆ.

ಯಶ್ ಅವರ ಹುಟ್ಟುಹಬ್ಬಕ್ಕೆ 50 ದಿನ ಇರುವಾಗ ನಟಿ ಶಾನ್ವಿ ಶ್ರೀವತ್ಸವ್ ತಮ್ಮ ಇನ್‍ಸ್ಟಾದಲ್ಲಿ ಕಾಮನ್ ಡಿಪಿ ಹಂಚಿಕೊಂಡಿದ್ದರು. ಅಲ್ಲದೆ ಅದಕ್ಕೆ ನಮಸ್ಕಾರ, ರಾಕಿಂಗ್ ಸ್ಟಾರ್ ಯಶ್ ಸರ್ ಅಭಿಮಾನಿಗಳಿಗೆಲ್ಲ. ಯಶ್ ಸರ್ ಅವರ ಯೋಚನೆ-ಯೋಜನೆ ಅವರ ಮಾರ್ಗ ನಮಗೆಲ್ಲಾ ಸ್ಫೂರ್ತಿದಾಯಕ. ಅವರ ಹಾದಿಯಲ್ಲಿ ನಡೆಯುತ್ತಿರುವ ಅವರ ಫ್ಯಾನ್ಸ್ ಆದ ನೀವು, ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ರೀತಿ ಹೆಮ್ಮೆ ಎನಿಸುತ್ತಿದೆ.

ಯಶ್ ಅವರ ಹುಟ್ಟುಹಬ್ಬಗೂ 50 ದಿನ ಮೊದಲು ಎಂದರೆ, 50ನೇ ದಿನವಾದ ಇಂದಿನಿಂದ ಜನವರಿ 8ರವರೆಗೂ ನೀವು ಮಾಡುತ್ತಿರುವ ಈ ಪರಿಹಾರದ ಒಂದು ಭಾಗವಾಗಿರಿ. ನೀರು ಉಳಿಸಿ, ಗಿಡಗಳನ್ನು ಬೆಳೆಸಿ ಅಮೂಲ್ಯವಾದಂತಹ ಅಭಿಯಾನದಲ್ಲಿ ನನ್ನನ್ನೂ ಭಾಗಿಯನ್ನಾಗಿಸಿದ್ದಕ್ಕೆ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗಕ್ಕೆ ಧನ್ಯವಾದ ಹೇಳುತ್ತಾ, ಈ ಪೋಸ್ಟರ್ ಪೋಸ್ಟ್ ಮಾಡಿದ್ದೀನಿ.

ಅಂದಹಾಗೆ ಈ ಪೋಸ್ಟರ್ ಕಾನ್ಸೆಪ್ಪ್ ನನಗ್ ಸಖತ್ ಇಷ್ಟ ಆಯಿತು. ಪರಿಸರ ಮಾಲಿನ್ಯದ ಮೇಲೆ ಕೋಪಗೊಂಡಿರುವ ಯಶ್ ಸರ್ ಅವರ ಮೈ ಮನಸ್ಸು ಹಸಿರುಮಯವಾಗಿರುವಂತೆ ಡಿಸೈನ್ ಮಾಡಿರುವ ರೀತಿ ಇಂಟ್ರೆಸ್ಟಿಂಗ್ ಎನಿಸುತ್ತಿದೆ. ಯಶ್ ಅವರ ಅಭಿಮಾನಿಗಳ ಈ ಅಭಿಯಾನದಲ್ಲಿ ನಾನು ಭಾಗಿಯಾಗಿದ್ದೀನಿ, ನೀವೂ ಭಾಗಿಯಾಗಿ. ಹಸಿರು ಬೆಳೆಸೋಣ, ಪರಿಸರ ಉಳಿಸೋಣ ಎಂದು ಬರೆದು ಪೋಸ್ಟ್ ಮಾಡಿದ್ದರು.

Comments

Leave a Reply

Your email address will not be published. Required fields are marked *