ನಾಗ್ಪುರದಲ್ಲಿ ದಾಖಲೆಯ 56 ಡಿಗ್ರಿ ಉಷ್ಣಾಂಶ- ಉತ್ತರಭಾರತದಲ್ಲಿ ಶಾಖಾಘಾತಕ್ಕೆ 210 ಸಾವು

ನವದೆಹಲಿ: ದೇಶದಲ್ಲಿ ರಣ ಬಿಸಿಲು ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಮೊನ್ನೆಯಷ್ಟೇ ದೆಹಲಿಯಲ್ಲಿ 42.9 ಡಿಗ್ರಿ ತಾಪಮಾನ ದಾಖಲಾಗಿತ್ತು. ಆದರಿಂದು ಮಹಾರಾಷ್ಟ್ರದ ನಾಗ್ಪುರದಲ್ಲಿ (Nagpura, Maharastra) ಬರೋಬ್ಬರಿ 56 ಡಿಗ್ರಿ ಉಷ್ಣಾಂಶ ನಮೂದಾಗಿದೆ.

ನಾಗ್ಪುರದ ಉತ್ತರ ಅಂಬಾಜರಿ ರಸ್ತೆಯ ಐಎಂಡಿ ಕೇಂದ್ರದಲ್ಲಿ 56 ಡಿಗ್ರಿ ತಾಪಮಾನ ದಾಖಲಾಗಿದೆ. ಸೊನೆಗಾಂವ್‍ನಲ್ಲಿ 54 ಡಿಗ್ರಿ ತಾಪಮಾನ ಕಂಡುಬಂದಿದೆ. ಜನರಂತೂ ಉಸ್ಸಪ್ಪ ಎಂದಿದ್ದಾರೆ. ಅಂದ ಹಾಗೇ, ಉತ್ತರ ಭಾರತದಲ್ಲಿ ರಣಬಿಸಿಲಿಗೆ ಕಳೆದ 24 ಗಂಟೆಯಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬಿಹಾರದಲ್ಲಿ 10 ಮತಗಟ್ಟೆ ಸಿಬ್ಬಂದಿ ಸೇರಿ 14 ಜನ ಮೃತಪಟ್ಟಿದ್ದಾರೆ. ಈವರೆಗೂ 210ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ.

ಬರೀ ಉತ್ತರಪ್ರದೇಶವೊಂದರಲ್ಲಿಯೇ (Uttarpradesh) ಬಿಸಿಗಾಳಿಯ ಶಾಖಾಘಾತಕ್ಕೆ 160ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದ್ರಲ್ಲಿ ವಾರಣಾಸಿ ನಿವಾಸಿಗಳ ಸಂಖ್ಯೆ 34. ಬಿಹಾರದಲ್ಲಿ 65, ಒಡಿಶಾದಲ್ಲಿ 41, ಜಾರ್ಖಂಡ್‍ನ ರಾಂಚಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಈವರೆಗೂ ಸಾವಿರಾರು ಮಂದಿ ಆಸ್ಪತ್ರೆ ಪಾಲಾಗಿದ್ದಾರೆ. ದೆಹಲಿ, ರಾಜಸ್ಥಾನ, ಹರಿಯಾಣ, ಪಂಜಾಬ್, ಬಿಹಾರ, ಉತ್ತರಪ್ರದೇಶದಲ್ಲಿ ಉಷ್ಣಾಂಶ 45 ಡಿಗ್ರಿ ಮೇಲ್ಪಟ್ಟೆ ಇದೆ. ಇದನ್ನೂ ಓದಿ: ‘ವಿಕೃತ ಕಾಮಿ, ಕೊನೆಯ ಉಸಿರಿರೋವರೆಗೂ ಶಿಕ್ಷೆ ನೀಡೋ ಕೇಸ್’- ಕೋರ್ಟ್‍ನಲ್ಲಿ ವಾದ, ಪ್ರತಿವಾದ ಹೇಗಿತ್ತು?